ಡಿವೈಎಫ್ ಐ ನಿಂದ ಹರೇಕಳ ಸೇತುವೆ ಗೇಟ್ ತೆರವು : ಸಂಚಾರಕ್ಕೆ ಮುಕ್ತ

ಉಳ್ಳಾಲ : ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಗೆ ಅಳವಡಿಸಲಾಗಿದ್ದ ಗೇಟುಗಳನ್ನು ಡಿವೈಎಫ್ಐ ಕಾರ್ಯಕರ್ತರು ಸಾರ್ವಜನಿಕರ ಸಹಕಾರದಲ್ಲಿ ಕಿತ್ತೆಸೆದು ಸಂಚಾರ ಮುಕ್ತಗೊಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆಯೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ ಒಂದರಿಂದ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿತ್ತು.

dyfi harekala bridge news

ಸಣ್ಣ ನೀರಾವರಿ ಇಲಾಖೆ ಆದೇಶ ಸಿಗದೇ ಮತ್ತು ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹಿನ್ನೆಲೆ ತೆರವುಗೊಳಿಸಲಾಗಿರಲಿಲ್ಲ.ಈ ನಡುವೆ ಸೋಮವಾರ ಅಧಿಕಾರಿಗಳೇ ಕುಂಬಳಕಾಯಿಯೊಂದಿಗೆ ಹರೇಕಳಕ್ಕೆ ಬಂದರೂ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾದರೂ ನೀತಿ ಸಂಹಿತೆ ಯಿಂದಾಗಿ ಹಿಂದೆ ಸರಿದಿದ್ದಾರೆ.ಇದರಿಂದ ಬೇಸತ್ತ ಹರೇಕಳ ಡಿವೈಎಫ್ಐ ಘಟಕದಿಂದ ನಿನ್ನೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಇಂದು ಬೆಳಿಗ್ಗೆಯೇ ಡಿವೈಎಫ್ಐ ಮುಖಂಡರು, ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸಾರ್ವಜನಿಕರ ಸಹಕಾರದಲ್ಲಿ ಸೇತುವೆಯ ಎರಡೂ ಕಡೆಗಳಲ್ಲಿ ಅಳವಡಿಸಲಾಗಿದ್ದ ಗೇಟುಗಳನ್ನು ಕೆತ್ತೆಸೆದು ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

Related Posts

Leave a Reply

Your email address will not be published.