ಸುಳ್ಯ ಎನ್ನೆoಪಿಯುಸಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ವತಿಯಿಂದ ಪರಿಸರ ಜಾಗೃತಿ ಯಾನ ಪರಿಸರ ಗೀತೆ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.ಮನುಷ್ಯ ತನ್ನ ದುರಾಸೆಗೆ ಪರಿಸರ ವನ್ನು ವಿನಾಶದ ಅಂಚಿಗೆ ತಳ್ಳ ಬಾರದು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕಾರ್ಯಕ್ರಮ ಉದ್ಘಾಟಕರಾದ ಎ ಓ ಎಲ್ ಇ (ರಿ)ಕಾರ್ಯದರ್ಶಿ ಕೆವಿ ಹೇಮನಾಥ್ ಅವರು ಹೇಳಿದರು.

ಕ ಸಾ ಪ ಅಧ್ಯಕ್ಷರಾದ ಚಂದ್ರ ಶೇಖರ್ ಪೇರಾಲು ಅಧ್ಯಕ್ಷತೆ ವಹಿಸಿದ್ದರು .ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಅವರು ಮಾತನಾಡಿ ಪರಿಸರ ಪ್ರೇಮ, ಪರಿಸರ ಜಾಗೃತಿ ನಮ್ಮೆಲ್ಲರ ಹೊಣೆ, ವನ್ಯ ಸಂಪತ್ತಿನ ಉಳಿವಿಗಾಗಿ ಮನುಷ್ಯ ಸಂಕುಲ ಮನಸ್ಫೂರ್ತಿಯಿಂದ ತೊಡಗಿಸಿಕೊಳ್ಳಬೇಕು ಎಂದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ಕ.ಸಾ. ಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕ ಸಾ ಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ,ಕಸಾಪ ಸದಸ್ಯರಾದ ಸಂಜೀವ ಕುದ್ಪಾಜೆ,ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಪ್ರಗತಿ ಮತ್ತು ಬಳಗದವರು ಆಶಯ ಗೀತೆ ಹಾಡಿದರು. ಪ್ರೊ ಸಂಜೀವ ಕುದ್ಪಾಜೆ ಸ್ವಾಗತಿಸಿದರು.ಸಂದ್ಯಾ ಮಂಡೆಕೋಲು ಪರಿಸರ ಗೀತೆ ಹಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಧನ್ಯವಾದ ಸಲ್ಲಿಸಿದರು. ಉಪನ್ಯಾಸದ ಬಳಿಕ ಚಂದ್ರಾವತಿ ಬಡ್ಡಡ್ಕ ವಂದಿಸಿದರು.ವಿದ್ಯಾರ್ಥಿನಿ ಶ್ರೇಯ ಎಂ ಜಿ ನಿರೂಪಿಸಿದರು

Related Posts

Leave a Reply

Your email address will not be published.