ಮೇ.24ರಂದು ಗಾಯತ್ರಿ ಫಿಲ್ಮ್ ಮೇಕರ್ಸ್‌ನ ಬಲಿಪೆ ತುಳುಚಿತ್ರ ಬಿಡುಗಡೆ

ಗಾಯತ್ರಿ ಫಿಲ್ಮ್ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ತಯಾರಾದ ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡು ಸಿದ್ಧಗೊಂಡಿರುವ ಬಲಿಪೆ ತುಳುಚಿತ್ರವು ಮೇ.24ರಂದು ಬಿಡುಗಡೆಗೊಳ್ಳಲಿದೆ.

ಬಲಿಪೆ ಎಂದರೆ ದೈವದ ವಾಹನವಾಗಿದ್ದು, ನೂರು ಹುಲಿಯ ಶಕ್ತಿಯನ್ನು ಹೊಂದಿರುವ ಒಂದು ಹುಲಿ ಎಂದರ್ಥ. ಬಲಿಪ ಚಿತ್ರದಲ್ಲಿ ತುಳುವ ಮಾಣಿಕ್ಯ ಅರವಿಂದ್ ಬೋಳಾರ್, ರಂಜನ್ ಬೋಳಾರ್ ಹಾಗೂ ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕ ನಟಿಯಾಗಿ ಅಂಕಿತಾ ಪಟ್ಲ ನಟಿಸಿದ್ದು, ವಿಶೇಷ ಪಾತ್ರದಲ್ಲಿ ತುಳುವ ಬೊಳ್ಳಿ ದಯಾನಂದ ಜಿ ಕತ್ತಾಲ್ ಸಾರ್ ಕಾಣಸಿಗಲಿದ್ದು, ಉಳಿದ ಪಾತ್ರಗಳಿಗೆ ಪವಿತ್ರ ಹೆಗ್ಡೆ, ಪ್ರಾಣ್ ಶೆಟ್ಟಿ, ಐಶ್ವರ್ಯ ಆಚಾರ್ಯ, ಗಿರೀಶ್ ಹೆಗ್ಡೆ, ಧೃತಿ ಸಾಯಿ, ಬೇಬಿ ಸುಧೀಷ್ಣ ಶೆಟ್ಟಿ, ನವೀನ್ ಬೊಂದೆಲ್, ದೀಪಕ್ ಸುವರ್ಣ ನಟಿಸಿದ್ದಾರೆ. ಪ್ರಮುಖವಾಗಿ ಪೆರಾರ ಕ್ಷೇತ್ರ, ಕಾರಿಂಜ ಕ್ಷೇತ್ರ, ಬಜ್ಪೆ ಮುಂತಾದೆಡೆ ಚಿತ್ರೀಕರಣ ನಡೆದಿದ್ದು, ಎರಡು ಹಾಡುಗಳು ಚಿತ್ರದಲ್ಲಿದೆ.

ಈ ಬಗ್ಗೆ ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ದಯಾನಂದ ಜಿ ಕತ್ತಾಲ್‌ಸಾರ್ ಮತ್ತು ಚಿತ್ರದ ನಿರ್ದೇಶಕ ಪ್ರಸಾದ್ ಅರ್ವ ಅವರು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಹೇಮಂತ್ ಸುವರ್ಣ, ಹುಚ್ಚ ವೆಂಕಟ್, ಸಂಗೀತ ನಿರ್ದೇಶಕ ಆಕಾಶ್ ರೆಡ್ಡಿ, ಸಾಹಸ ನಿರ್ದೇಶಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.