ಕ್ರಿಯಾತ್ಮಕ ಚಿಂತನೆಗಳ ಮೂಲಕ ಬೈಂದೂರಿನ ಅಭಿವೃದ್ಧಿಗೆ ಪ್ರಯತ್ನಿಸಿ : ಶಾಸಕ ಗುರುರಾಜ್ ಗಂಟಿಹೊಳೆ

ಸರಕಾರಿ ಸೇವೆಯಲ್ಲಿದ್ದಾಗ ಕರ್ತವ್ಯ ಮತ್ತು ಜವಾಬ್ದಾರಿಗಳು ಸಹಜ. ಅದರ ಜೊತೆಗೆ ತಾವಿರುವ ಇಲಾಖೆಯಿಂದ ಯಾವ ರೀತಿಯ ಹೊಸ ಮಾರ್ಪಡುಗಳ ಮೂಲಕ ಜನರಿಗೆ ಇನ್ನಷ್ಟು ಸೇವೆ ನೀಡಲು ಸಾಧ್ಯ ಎನ್ನುವ ಚಿಂತನೆ ಮತ್ತು ಕ್ರಿಯಾತ್ಮಕ ಯೋಜನೆಗಳ ಮೂಲಕ ಬೈಂದೂರಿನ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಬೈಂದೂರು ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಐ.ಎ.ಎಸ್ ಪ್ರೋಪೇಷನರಿ ಸತೀಶ, ಕುಂದಾಪುರ ತಹಶೀಲ್ದಾರ ಶೋಭಾಲಕ್ಷ್ಮಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ, ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್.ಜಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
