ಹಾಸನ: ಎತ್ತಿನಹೊಳೆ ಯೋಜನೆ ಕಾಮಗಾರಿ ನೂರು ದಿನದೊಳಗಾಗಿ ಪ್ರಾರಂಭಿಸಿ-ಡಿಕೆಶಿ
ಹಾಸನ ಜಿಲ್ಲೆಯ ಸಕಲೇಶಪುರ ಹೆಬ್ಬನಹಳ್ಳಿ ಸಮೀಪ ಇರುವ ಎತ್ತಿನಹೊಳೆ ಯೋಜನೆಯ ಕಚೇರಿಗೆ ಇಂದು ಭೇಟಿ ನೀಡಿದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು.
ಸಭೆಯಲ್ಲಿ ಯೋಜನೆ ಪ್ರಾರಂಭಕ್ಕೆ ಇರುವ ತೊಂದರೆಗಳ ಕುರಿತಾಗಿ ಚರ್ಚಿಸಿದ ಸಚಿವರು, ವಿದ್ಯುತ್ ಇಲಾಖೆ ಮತ್ತು ಭೂ ಸ್ವಾದೀನ ಪಡಿಸಿಕೊಳ್ಳಲು ಕಂದಾಯ ಇಲಾಖೆಯಿಂದ ಇರುವ ತೊಂದರೆ ಕುರಿತಾಗಿ ಚರ್ಚಿಸಿ ಭೂಮಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ತುರ್ತಾಗಿ ಪರಿಹಾರ ನೀಡಬೇಕು ಅಥವಾ ಪರಿಹಾರ ಸಿಗದೇ ಇನ್ನೂ ಬಾಕಿ ಇರುವಂತಹ ಜಮೀನುದಾರರಿಗೆ ಕೂಡಲೇ ಪರಿಹಾರದ ವ್ಯವಸ್ಥೆ ಮಾಡಬೇಕು
ಹಾಗೂ ವಿದ್ಯುತ್ ಇಲಾಖೆಯಲ್ಲಿ ತೊಡಕಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಭಾನುವಾರ ದಿನಗಳನ್ನು ನೋಡಿಕೊಂಡು ರೋಡ್ ಸೆಟ್ಟಿಂಗ್ ಮಾಡಿ ಬೇಗ ಯೋಜನೆ ಪ್ರಾರಂಭ ಮಾಡಬೇಕು. ಇದಕ್ಕೆ ಕೇವಲ 100 ದಿನಗಳನ್ನು ನೀಡಿದ್ದು, ಅಷ್ಟರ ಒಳಗಾಗಿ ಎತ್ತಿನಹೊಳೆ ಯೋಜನೆಯಲ್ಲಿ ನೀರತ್ವ ಕೆಲಸ ಪ್ರಾರಂಭವಾಗಬೇಕು ಎಂದು ತಿಳಿಸಿದರು.
ಪಂಪ್ ಹೌಸ್ ಭೇಟಿ ನೀಡಿದ ಉಪ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಯಂತ್ರಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು ಮತ್ತು ನೀರನ್ನು ಶೇಖರಿಸುವ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ನೂರು ದಿನಗಳ ನಂತರ ಪುನಃ ಸಭೆ ಕರೆದು ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದರು. ಕಾಡಾನೆ ಹಾವಳಿ ಕುರಿತಂತೆ ಮಾತನಾಡಿದ ಸಚಿವರು ಈ ಈ ಬಗ್ಗೆ ನಾನು ಸಂಬಂಧಪಟ್ಟ ಅರಣ್ಯ ಇಲಾಖೆ ಮತ್ತು ಪೆÇಲೀಸ್ ಇಲಾಖೆಯವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಎಂದರು.