ಸಮಾಜಸೇವಕ ವಾಸುದೇವ ಆರ್. ಕೋಟ್ಯಾನ್ ನಿಧನ

ಭಾರತ್ ಕೋಅಪರೇಟಿವ್ ಬ್ಯಾಂಕ್ ಮುಂಬಯಿಯ ಮಾಜಿ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಹೆಜಮಾಡಿ, ಬಿಲ್ಲವರ ಸಂಘ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿ ಇದರ ಗೌರವಾಧ್ಯಕ್ಷರಾಗಿ, ಮಾರ್ಗದರ್ಶಕರಾಗಿ, ಸಂಘದ ಹಾಗೂ ಗಡಿಯ ಸಮಗ್ರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡುಪಾಗಿಸಿಕೊಂಡ ವಾಸುದೇವ ಆರ್. ಕೋಟ್ಯಾನ್ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಮುಂಬಯಿಯಲ್ಲಿ ಇಂದು ಸಂಜೆ 7 ಗಂಟೆಗೆ ಜರುಗಲಿದೆ.