ಹೊಕ್ಕಾಡಿಗೋಳಿ : ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ ನಡೆಯುವ ಶ್ರೀ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಗೆ ಪ್ರಸಾದ್ ಅರ್ಪಿಸಿ, ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಅವರು ಈ ಹಿಂದೆ ನಡೆಯುತ್ತಿದ್ದ ಕಂಬಳಗಳ ಸಂದರ್ಭದಲ್ಲಿ ಎಲ್ಲರೂ ಕಂಬಳಕ್ಕಾಗಿ ಕಾಯುತ್ತಿದ್ದ ಸಂದರ್ಭವಿತ್ತು ಆದರೆ ಈ ಬಾರಿಯ ಕಂಬಳವು ಎರಡೆರಡು ಕಡೆಗಳಲ್ಲಿ ನಡೆಯುತ್ತಿರುವುದರಿಂದ ಬೇಸರವಾಗಿದೆ. ಈ ವರ್ಷ ಯಾವುದೋ ವಿಷಗಳಿಗೆ ಅಥವಾ ದೈವಿಚ್ಛೆ ಎಂದು ತಿಳಿದುಕೊಳ್ಳೋಣ ಮುಂದಿನ ಕಂಬಳದ ಸಂದರ್ಭದಲ್ಲಿ ಎರಡೂ ಕಡೆಯ ಸಮಿತಿಯವರು ಒಟ್ಟಾಗಿ ಸೇರಿ ಕಂಬಳದಲ್ಲಿ ಪಾಲ್ಗೊಳ್ಳುವಂತ್ತಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹೊಕ್ಕಾಡಿಗೋಳಿ ಕಂಬಳಕ್ಕೆ ಮತ್ತು ಇಲ್ಲಿನ ಮಣ್ಣಿಗೆ ವಿಶೇಷವಿದೆ. ಅಧಿಕಾರವು ಸೇವೆ ಮಾಡಲು ಹೊರತು ಧ್ವೇಷ ಸಾಧನೆಗೆ ಅಲ್ಲ. ಎರಡೆರಡು ಕಡೆಗಳಲ್ಲಿ ಒಂದೇ ದಿನ ಕಂಬಳಗಳು ನಡೆಯುವುದು ಸರಿಯಲ್ಲ. ದೇವರ ಶಾಪಕ್ಕಿಂತಲೂ ಜನರ ಶಾಪ ದೊಡ್ಡದು. ಜಿಲ್ಲಾ ಕಂಬಳ ಸಮಿತಿಯನ್ನೊಳಗೊಂಡು ಇಲ್ಲಿನ ಕಂಬಳಕ್ಕೆ ದಿನ ನಿಗದಿಪಡಿಸಲಾಗಿದೆ ಆದರೆ ಇದೇ ದಿನದಂದು ಇನ್ನೊಂದು ಕಡೆಯಲ್ಲಿ ಕಂಬಳವನ್ನು ಏಕಪಕ್ಷೀಯವಾಗಿ ಆಯೋಜಿಸುವ ಮೂಲಕ ವಿರುದ್ಧವಾಗಿ ವರ್ತಿಸಿರುವುದು ಸರಿಯಲ್ಲ ಎಂದ ಅವರು ಈ ಕಂಬಳಕ್ಕೆ ಕೋರ್ಟಿನಲ್ಲಿ ತಡೆಯೊಡ್ಡಲಾಗಿತ್ತು ಆದರೆ ನಮ್ಮ ವಕೀಲರಾದ ಅರುಣ್ ಶ್ಯಾಮ್ ಮತ್ತು ರಕ್ಷಿತ್ ಜೈನ್ ಅವರ ಸಕಾಲಿಕ ವಾದದಿಂದಾಗಿ ಕೋಟ್೯ ತಡೆಯಾಜ್ಞೆಯನ್ನು ನಿರಾಕರಿಸಿರುವುದರಿಂದ ಜಯ ಹೊಕ್ಕಾಡಿಗೋಳಿ ಕಂಬಳ ಸಮಿತಿಗೆ ಆಗಿದೆ ಇದು ದೇವರ ಅನುಗ್ರಹ ಮತ್ತು ರಶ್ಮಿತ್ ಶೆಟ್ಟಿ ಮತ್ತು ಕಂಬಳ ಸಮಿತಿಯ ಶ್ರಮದ ಫಲವಾಗಿದೆ ಎಂದರು.
ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕುಂಜಾಡಿ, ರಾಯಿ ಗ್ರಾ.ಪಂಚಾಯತ್ ನ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಕುಕ್ಕಿಪ್ಪಾಡಿ ಗ್ರಾ.ಪಂನ ಅಧ್ಯಕ್ಷ ಯೋಗೀಶ್ ಆಚಾರ್ಯ ಎಲ್ಪೆಲ್, ಉಪಾಧ್ಯಕ್ಷೆ ಬೇಬಿ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ನ ಅಧ್ಯಕ್ಷ ಪ್ರಭಾಕರ ಪ್ರಭು, ವೈದ್ಯ ಡಾ.ಸುದೀಪ್ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ , ಸಚಿನ್ ಅಡಪ, ಕಂಬಳ ಕೋಣಗಳ ಯಜಮಾನ ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ,ಊರಿನ ಗಣ್ಯರು, ಹಿರಿಯರು ಮತ್ತಿತರರು ಈ ಸಂದರ್ಭದಲ್ಲಿದ್ದರು.
ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.