ಕುತ್ತಾರು ಸಮೀಪದ ದೇವಿಪುರದಲ್ಲಿ: ನಿರ್ಮಾಣಗೊಂಡ “ಭೀಮ ಸೌಧ” ಉದ್ಘಾಟನೆ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರ ಅಲ್ಲ, ಅವರ ತತ್ವ, ಆದರ್ಶಗಳನ್ನ ಯುವ ಪೀಳಿಗೆಗೂ ವರ್ಗಾಯಿಸುವ ಕಾರ್ಯ ಇಲ್ಲಿ ನಡೆಯಬೇಕು.ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ,ದ.ಕ ಜಿಲ್ಲಾ ಪಂಚಾಯತ್ ,ಉಳ್ಳಾಲ ತಾಲೂಕು ಪಂಚಾಯತ್ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕುತ್ತಾರು ಸಮೀಪದ ದೇವಿಪುರದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ “ಭೀಮ ಸೌಧ” ವನ್ನು ಅವರು ಉದ್ಘಾಟಿಸಿ ಮಾತನಾಡಿದರು

ಹಿರಿಯ ದೈವ ನರ್ತಕರಾದ ಮಾಯಿಲ, ರಾಣಿಪುರ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಜಯಪ್ರಕಾಶ್ ಡಿಸೋಜ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್.ಗಟ್ಟಿ,ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್,ಮುನ್ನೂರು ಗ್ರಾ.ಪಂ.ಅಧ್ಯಕ್ಷರಾದ ರೆಹನಾ ಬಾನು,ಉಪಾಧ್ಯಕ್ಷರಾದ ಮಹಾಬಲ ಟಿ.ದೆಪ್ಪೆಲಿಮಾರ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಬಾರಿ,ಜಿ.ಪಂ.ಯೋಜನಾ ನಿರ್ದೇಶಕರಾದ ಜಯರಾಮ್, ಉಳ್ಳಾಲ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್,ಸ್ಥಳೀಯ ಮುಖಂಡರಾದ ಮಾದಪ್ಪ,ಗ್ರಾ.ಪಂ ಸದಸ್ಯರಾದ ಬಾಬು ಶೆಟ್ಟಿ,ಲೀಲಾವತಿ ಮೊದಲಾದವರು ಉಪಸ್ಥಿತರಿದ್ದರು.
