ಇಸ್ರೇಲ್: ಇಸ್ರೇಲ್-ಹಮಾಸ್ ಕದನ: ಇಸ್ರೇಲ್‍ನ 44 ಸೈನಿಕರು, 700ಕ್ಕೂ ಹೆಚ್ಚು ಜನರು ಸಾವು

ಇಸ್ರೇಲ್ ಹಾಗೂ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಎರಡು ಕಡೆಗಳ ಸಂಘರ್ಷದಲ್ಲಿ ಮೃತರ ಸಂಖ್ಯೆ 1,100 ಕ್ಕೂ ಮೇಲ್ಪಟ್ಟಿದೆ ಎಂದು ತಿಳಿದು ಬಂದಿದೆ. ಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಬಳಿಕ ಇಸ್ರೇಲ್ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಯುದ್ಧ ಘೋಷಿಸಿತು.

ಮೂರು ದಿನಗಳ ಸಂಘರ್ಷವು ಈಗಾಗಲೇ ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗಿದ್ದು, ಇಸ್ರೇಲ್‍ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ದಾಳಿಯಿಂದ ಯುದ್ಧ ಆರಂಭವಾಗಿದ್ದು ಇದಕ್ಕೆ ನಮ್ಮ ಸೇನೆ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ ಅವರು ಉಗ್ರಗಾಮಿ ಗುಂಪಿನ ಅಡಗುತಾಣಗಳನ್ನು ಸಂಪೂರ್ಣ ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದರು.

ಉಗ್ರರ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೆÇಲೀಸರು ಸೇರಿದಂತೆ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಮತ್ತು 2,048ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಸ್ರೇಲ್ ನಲ್ಲಿ ನಡೆಯುತಿದ್ದ ಸಂಗೀತೋತ್ಸವ ಕಾರ್ಯಕ್ರಮದ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಪರಿಣಾಮ ಸುಮಾರು 260 ಮಂದಿ ಮೃತಪಟ್ಟಿದ್ದಾರೆ.

Related Posts

Leave a Reply

Your email address will not be published.