ಜಪ್ಪಿನಮೊಗರವಿನ ಗ್ಯಾರೇಜ್‍ವೊಂದರಲ್ಲಿ ಆಕಸ್ಮಿಕ ಬೆಂಕಿ

ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನಮೊಗರಿನ ಗ್ಯಾರೇಜ್‍ವೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಗ್ಯಾರೇಜ್‍ನ ಮುಂದೆ ದುರಸ್ತಿಗಾಗಿ ನಿಲ್ಲಿಸಲಾಗಿದ್ದ ಹಳೆಯ ಬಸ್ ಮತ್ತಿತರ ಕೆಲವು ವಾಹನಗಳು ಸಂಪೂರ್ಣ ಬೆಂಕಿಯ ರಭಸಕ್ಕೆ ಸುಟ್ಟು ಭಸ್ಮ ಆಗಿವೆ.ರಾತ್ರಿ 10.45 ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ರು ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

Related Posts

Leave a Reply

Your email address will not be published.