ಕಡಬ: ಕಾಡಾನೆ ಮತ್ತು ಇತರ ಪ್ರಾಣಿಗಳ ಉಪಟಳ: ಅ.26ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಕಡಬ: ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಆನೆ ಹಾಗೂ ಇತರ ಪ್ರಾಣಿಗಳ ಉಪಟಳ ಮಿತಿ ಮೀರುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಗ್ರಹಿಸಿ ಅ.26ರಂದು ಕಡಬದಲ್ಲಿ ಬೃಹತ್ ಮೆರವಣಿಗೆ ನಡೆಸಿ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಐತ್ತೂರು ಮರ್ಧಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ ತಿಳಿಸಿದ್ದಾರೆ.

ಕಡಬದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆನೆ ಉಪಟಳದಿಂದ ಬೇಸತ್ತ ರೈತರು ಒಗ್ಗೂಡಿ ಪಕ್ಷಾತೀತವಾಗಿ ಸಂಘಟಿತರಾಗಿದ್ದಾರೆ. ಗುರುವಾರ ಬೆಳಿಗ್ಗೆ ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ವಠಾರದಲ್ಲಿ ಸೇರಿ ಬಳಿಕ ಬೃಹತ್ ಮೆರವಣಿಗೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕಡಬ ತಾಲೂಕು ಕಛೇರಿಯಲ್ಲಿ ಜಮಾವಣೆಗೊಂಡು ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಸಿಲಾಗುವುದು, ಮನವಿ ಸ್ಪಂದನೆ ದೊರೆಯದೇ ಹೋದಲ್ಲಿ ಮುಂದೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಪಿಪಿ ವರ್ಗೀಸ್ ಮಾತನಾಡಿ ಆನೆ ಹಾವಳಿಯಿಂದಾಗಿ ಕಡಬ ತಾಲೂಕಿನ ಕೆಲವು ಗ್ರಾಮ ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಆನೆ ದಾಳಿಯಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಸರಿಯಾಗಿ ಪರಿಹಾರ ಸಿಕಿಲ್ಲ ಎನ್ನುವು ಮಾಹಿತಿಯಿದೆ.ಈ ಹಿನ್ನೆಲೆಯಲ್ಲಿ ನಾವು ನಮ್ಮ ಸರಕಾರದ ಪ್ರತಿನಿಧಿಗಳಲ್ಲಿ, ಮುಖ್ಯಮಂತ್ರಿಯವರಲ್ಲಿ, ಸಚಿವರಲ್ಲಿ, ಸಂಬಂಧಪಟ್ವವರೊಡನೆ ಸೇರಿಕೊಂಡು ರೈತರ ಮನವಿಗೆ ಶೀಘ್ರ ಸ್ಪಂದಿಸುವಂತೆ ಒತ್ತಡ ಹೇರುವ ಹಾಗೂ ಮೃತಕುಟುಂಬಗಳಿಗೆ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.

ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆನೆ ದಾಳಿಯಿಂದಾಗಿ ತಾಲೂಕಿನಲ್ಲಿ ನಾಲ್ಕು ಜನ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಒಂದಷ್ಟು ನ್ಯಾಯವನ್ನು ನೀಡಬೇಕು, ಜನ ಇವತ್ತು ಬದುಕುವುದಸ್ಕೋರ ಹೋರಾಟ ಮಾಡಬೇಕಾದ ಅನಿವಾರ್ಯತೆ ಕಾಲಘಟ್ಟದಲ್ಲಿ ಇದ್ದೇವೆ. ಹಾಗಾಗಿ ಆನೆ ಬಾದಿತ ಪ್ರದೇಶದ ಜಾಗೃತ ರೈತ ಕುಟುಂಬಗಳು ಒಟ್ಟಾಗಿ ಸರಕಾರದ ಗಮನ ಸೆಳೆಯುವ ಕಾರ್ಯಕ್ಕೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಹಿಗಾಗಲೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಹೋರಾಟದ ಮುಂದಡಿ ಇಟ್ಟಿದ್ದೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್, ಜಾಗೃತ ರೈತ ಕುಟುಂಬಗಳ ಒಕ್ಕೂಟದ ಪ್ರಮುಖರಾದ ಕೆ.ಟಿ.ಪಿಲಿಪ್, ತಮ್ಮಯ್ಯ ಗೌಡ, ಅಶ್ರಫ್ ಶೇಡಿಗುಂಡಿ, ಯೂಸೂಫ್ ಸುಂಕದಕಟ್ಟೆ, ಸತೀಶ್ ಮೀನಾಡಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.