ಕಾರುಗಳೆರಡರ ಓವರ್ ಟೇಕ್ ಭರದಲ್ಲಿ ಕೆಎಸ್ಆರ್ ಟಿಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅವಘಡ

ಕಡಬ : ಕಾರುಗಳೆರಡರ ಓವರ್ ಟೇಕ್ ಭರದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರೀ ಅವಘಡವೊಂದು ತಪ್ಪಿದ ಘಟನೆ ಕಡಬ ಸಮೀಪದ ಮರ್ಧಾಳದ ಬ್ರಾಂತಿಕಟ್ಟೆ ಎಂಬಲ್ಲಿ ಭಾನುವಾರದಂದು ನಡೆದಿದೆ. ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಎಕ್ಸ್ಪ್ರೆಸ್ ಬಸ್ ಗೆ ಬ್ರಾಂತಿಕಟ್ಟೆ ತಿರುವಿನಲ್ಲಿ ಕಾರೊಂದು ಓವರ್ಟೇಕ್ ಮಾಡುವಾಗ ಹೊಡೆದು ಮುಂದೆ ಸಾಗಿದ್ದು, ಅಪಾಯವನ್ನರಿತ ಬಸ್ ಚಾಲಕ ರಸ್ತೆಯಿಂದ ಬಸ್ಸನ್ನು ಕೆಳಗಿಳಿಸಿ ನಿಯಂತ್ರಿಸಿದ ಪರಿಣಾಮ ಬಸ್ ರಸ್ತೆ ಪಕ್ಕ ಸಿಲುಕಿಕೊಂಡಿತ್ತು. ಚಾಲಕನ ಸಮಯಪ್ರಜ್ಞೆಯಿಂದ ಪಕ್ಕದಲ್ಲಿದ್ದ ಬೃಹತ್ ಕಮರಿಗೆ ಬಸ್ ಉರುಳುವುದು ತಪ್ಪಿದಂತಾಗಿದೆ. ಬಸ್ಸಿನಲ್ಲಿ ಹಲವು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಬಸ್ಸನ್ನು ಮೇಲಕ್ಕೆತ್ತಲಾಯಿತು.