20 ಅಡಿ ಆಳದ ಸುರಂಗದೊಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಾಕ೯ಳ ಅಗ್ನಿಶಾಮಕದ ಸಿಬ್ಬಂದಿ

ಮೂಡುಬಿದಿರೆ : ಪುತ್ತಿಗೆ ಗ್ರಾ. ಪಂಚಾಯತ್ ವ್ಯಾಪ್ತಿಯ ಬಂಗ್ಲೆ ಎಂಬಲ್ಲಿರುವ 30 ಅಡಿ ಆಳದ ಬಾವಿಯಲ್ಲಿರುವ ಸುಮಾರು 20 ಅಡಿ ಆಳದ ಸುರಂಗದೊಳಗೆ ಆಕಸ್ಮಿಕವಾಗಿ ಬಿದ್ದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಕ೯ಳದ ಅಗ್ನಿಶಾಮಕ ಇಲಾಖೆಯ ಸಿಬಂಧಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಸುಮಾರು 38 ವರ್ಷ ಪ್ರಾಯದ ರಾಧಾಕೃಷ್ಣ (ಜಾಣಪ್ಪ ಗೌಡರ ಮಗ)ಬಾವಿಯ ಸುರಂಗದೊಳಗೆ ಬಿದ್ದ ವ್ಯಕ್ತಿ.

ಕಾರ್ಕಳದ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಯ ಮೂಲ್ಯ ಹಾಗೂ ರೂಪೇಶ್ ಇವರೊಂದಿಗೆ ನಿತ್ಯಾನಂದ ಮತ್ತು ಬಸವರಾಜ ಇವರ ಸಹಕಾರದೊಂದಿಗೆ ಸುಮಾರು 2 ಗಂಟೆಗಳ ಕಾಲ ಸಾಹಸಮಯ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

Related Posts

Leave a Reply

Your email address will not be published.