ಕಾರ್ಕಳ: ಹಲಸು ಸಂಸ್ಕರಣಾ ಘಟಕದ ಉದ್ಘಾಟನೆ

ನಿಟ್ಟೆ ಸುಫಲ ರೈತ ಉತ್ಪಾದಕ ಮತ್ತು ಹಲಸು ಸಂಸ್ಕರಣಾ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಎಸ್‌ಎಂಇಯ ಡೈರೆಕ್ಟರ್ ಡಾ. ಗ್ಲೋರಿ ಸ್ವರೂಪ ಉದ್ಘಾಟಿಸಿ ಮಾತನಾಡಿ, ಸುಫಲ ರೈತ ಉತ್ಪಾದಕ ಘಟಕವು ಸುಮಾರು ಆರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಮೂರು ವರ್ಷಗಳ ಕಾಲ ಹಲಸಿನ ಹಣ್ಣಿನ ಬಗ್ಗೆ ಅಧ್ಯಯನ ಮಾಡಿ ಅದರಿಂದ ತಯಾರಿಸಲಾಗುವ ವಿವಿಧ ಖಾದ್ಯಗಳು ಮತ್ತು ಆರೋಗ್ಯಕ್ಕೆ ಆಗುವ ಉಪಯೋಗಗಳ ಮೂಲಕ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಸುಫಲ ಕಂಪನಿಯ ಎಂ.ಡಿ ನವೀನ್ ನಾಯಕ್ ನಿಟ್ಟೆ, ಚೇರ್ಮ್ಯಾನ್ ಎನ್ .ಟಿ ಪೂಜಾರಿ, ಇನ್ ಕ್ಯುಬೇಷನ್ ಸೆಂಟರ್‌ನ ಸಿಇಒಎಪಿ ಆಚಾರ್ಯ ಕೊಡಗು ಯುನಿವರ್ಸಿಟಿ ವಿ. ಸಿ ಡಾ.ಅಶೋಕ್ ಆಲೂರು, ಧರ್ಮಸ್ಥಳ ಶಿರಿ ಎಂ.ಡಿ ಜನಾರ್ಧನ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.