ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ವತಿಯಿಂದ ಸಮಾಲೋಚನಾ ಸಭೆ

ಮಂಗಳೂರು: ದಿನಾಂಕ :28/09/2025 ರ ಭಾನುವಾರದಂದು ಸೌಹಾರ್ದ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ, ಮೈಸೂರು ಪ್ರಾಂತ್ಯದ ವತಿಯಿಂದ ಸಮಾಲೋಚನಾ ಸಭೆಯನ್ನು ಹೋಟೆಲ್ ಶ್ರೀನಿವಾಸ ಹಂಪನಕಟ್ಟೆ ಮಂಗಳೂರು ಇಲ್ಲಿ ಆಯೋಜಿಸಲಾಯಿತು. ಸಭೆಯ ಉದ್ಘಾಟನೆಯನ್ನು ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಮಾನ್ಯ ಶ್ರೀ ಜಿ. ನಂಜನಗೌಡ ಇವರು ನೆರವೇರಿಸಿದರು, ಈ ಸಂದರ್ಭದಲ್ಲಿ ಸಭೆಯಲ್ಲಿ ಸಂಯುಕ್ತ ಸಹಕಾರಿಯ ಮಾನ್ಯ ನಿರ್ದೇಶಕರಾದ ಶ್ರೀ ಮಂಜುನಾಥ್ ಎಸ್ ಕೆ , ಶ್ರೀಮತಿ ಭಾರತಿ ಜಿ ಭಟ್ ಉಡುಪಿ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪಿ ಜಗನ್ನಾಥ್ ಶೆಟ್ಟಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಭಾಸ್ಕರ್ ದೇವಸ್ಯ ರವರು ಮತ್ತು ಮೈಸೂರು ಪ್ರಾಂತೀಯ ಅಧಿಕಾರಿಗಳಾದ ಗುರುಪ್ರಸಾದ್ ಬಂಗೇರ* ಹಾಗೂ ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿಜಯ್ ಬಿ ಎಸ್ ಮತ್ತು ನಂದನ್ ಬಿ ಎನ್, ಸಿಬ್ಬಂದಿಗಳಾದ ಶ್ರೀ ರೋಹಿತ್ ಮತ್ತು ಶ್ರೀ ಅರುಣ್ , ಉಪಸ್ಥಿತರಿದ್ದರು.ಸಭೆಯಲ್ಲಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಸಹಕಾರಿಗಳಿಂದ ಸಾಕಷ್ಟು ಪ್ರಶ್ನೆಗಳು, ಸಲಹೆ , ಅಭಿಪ್ರಾಯವನ್ನು ಸ್ವೀಕರಿಸಲಾಯಿತು.

ಸಹಕಾರಿಗಳು ಕೇಳಿದ ಎಲ್ಲಾ ಪ್ರಶ್ನೆ ಗಳಿಗೆ, ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಶ್ರೀ ಜಿ. ನಂಜನಗೌಡರವರು ಉತ್ತರಿಸಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳಿಂದ ಒಟ್ಟಾರೆ 170 ಜನ ಪ್ರತಿನಿಧಿಗಳು ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಭೆಯನ್ನು ಯಶಸ್ವಿಗೊಳಿಸಿದರು.