ಅತ್ಯಾಚಾರಿಗಳನ್ನು ಪೋಷಿಸುತ್ತಿರುವ ಬಿಜೆಪಿಯನ್ನು ಧಿಕ್ಕರಿಸಿ : ದಲಿತ ಮುಖಂಡ ಶೇಖರ್ ಹೆಜಮಾಡಿ

ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ದಲಿತರ ನಿರ್ಲಕ್ಷ್ಯ ನಡೆಸುವ ಮೂಲಕ ನಮ್ಮನ್ನು ಮತ್ತೆ ಗತ ಕಾಲ ದತ್ತ ತಳ್ಳುವ ಪ್ರಕ್ರಿಯೆ, ಜನಿವಾರ ಶಾಹಿ ಬಿಜೆಪಿ ಪಕ್ಷದಿಂದ ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸಂಘಟನೆಗಳ ಅನತಿಯಂತೆ ಕಾಪು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ದಲಿತ ಮುಖಂಡ ಶೇಖರ್ ಹೆಜಮಾಡಿ ತಮ್ಮ ಸಮಾಜಕ್ಕೆ ಕರೆ ನೀಡಿದ್ದಾರೆ.
ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ…ಅಲ್ಲಿ ಇಲ್ಲಿ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿದ್ದು, ಅವರಿಗೆ ಶಿಕ್ಷಯಾಗುತ್ತಿಲ್ಲ ಕಾರಣ ಬಿಜೆಪಿ ಅವರಿಗೆ ರಕ್ಷಣೆ ನೀಡಿ ಪೋಷಿಸುತ್ತಿದ್ದೆ. ಮತ್ತೊಂದು ಮಗ್ಗುಲಲ್ಲಿ ದಲಿತರ ಮಕ್ಕಳಿಗೆ ಶಿಕ್ಷಣ ಸಿಗದಂತೆ ನೋಡಿಕೊಳ್ಳುವ ಮೂಲಕ ನಮ್ಮನ್ನು ಮುಖ್ಯ ವಾಹಿನಿಗೆ ಬಾರದಂತೆ ಮಾಡಲಾಗುತ್ತಿದೆ. ಉದ್ಯೋಗವಂತ್ತೂ ಮಾರಿಚಿಕೆಯಾಗುತ್ತಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ನಾವು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ದಿಕ್ಕರಿಸಿ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಮಾಡಿದ್ದೇವೆ ಎಂದರು. ಈ ಸಂದರ್ಭ ಸಂಘಟನೆಯ ಮುಖಂಡರಾದ ಕೀರ್ತಿ ಕುಮಾರ್, ವಿಠಲ್ ಮಾಸ್ತರ್, ಸೌಮ್ಯಾ ಸಂಜೀವ, ಕೇಶವ ಸಾಲ್ಯಾನ್, ವಸಂತಿ ಪಡುಬಿದ್ರಿ ಹಾಗೂ ಸತೀಶ್ ಮೂಳೂರು ಉಪಸ್ಥಿತರಿದ್ದರು.
