ಕಿನ್ನಿಗೋಳಿ: ಮಾನವನ ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ: ಹಿಲ್ಡಾ ಡಿಸೋಜ

ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆಯು ಸಹಕಾರಿ ಎಂದು ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ  ಹಿಲ್ಡಾ ಡಿಸೋಜ ಅವರು ಹೇಳಿದರು.

ಅವರು ಐಕಳ ಶಕ್ತಿಕಲ್ಯಾಣಿ ಮೈದಾನದಲ್ಲಿ ಐಕಳ ಕಂಬಲ ಫ್ರೆಂಡ್ಸ್ ವತಿಯಿಂದ ಆಶಕ್ತರಿಗೆ ವೈದ್ಯಕೀಯ ನೆರವಿಗಾಗಿ ಐಕಳ ಪ್ರೀಮಿಯರ್ ಲೀಗ್  ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ  ಉದ್ಘಾಟಿಸಿ ಮಾತನಾಡಿದರು.

ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದೀವಾಕರ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ವೇಳೆ  ಉದ್ಯಮಿ ರಘುರಾಮ ಏಳಿಂಜೆ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಐಕಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಪದ್ಮಿನಿ ವಿ ಸಾಲ್ಯಾನ್ ,ಉದ್ಯಮಿ ರಘುರಾಮ ಏಳಿಂಜೆ,ಐಕಳ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ವಿನೂತನ್ ಕುಮಾರ್ ,ಜಯಪಾಲ ಶೆಟ್ಟಿ ಐಕಳಬಾವ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.