ಕೊಳ್ನಾಡು: ಕಟ್ಟತ್ತಿಲ ಶ್ರೀ ಮಹಾಮ್ಮಾಯೀ ದೇವಿ ದೈವಸ್ಥಾನ, ಮೇ 23- 29ರ ವರೆಗೆ ದೈವಸ್ಥಾನದ ಬ್ರಹ್ಮಕಲಶ
ವಿಟ್ಲ: ಕೊಳ್ನಾಡು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಶ್ರೀ ಮಹಾಮ್ಮಾಯೀ ದೇವೀ ಹಾಗೂ ಪರಿವಾರ ದೈವಗಳ ಟ್ರಸ್ಟ್ ವತಿಯಿಂದ ಮೇ 23ರಿಂದ 29ರ ವರೆಗೆ ಶ್ರೀ ಕ್ಷೇತ್ರ ಕಟ್ಟತ್ತಿಲದಲ್ಲಿ ಶ್ರೀ ಮಹಾಮ್ಮಾಯೀ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ನಾಯ್ಕ್ ದೈಪಲ ಮತ್ತು ಟ್ರಸ್ಟ್ ಅಧ್ಯಕ್ಷ ರವೀಂದ್ರನಾಥ ಕೆ.ಮುಳ್ಳೇರಿಯ ತಿಳಿಸಿದರು.
ವಿಟ್ಲದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು 400 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನದ ಜೀರ್ಣೋದ್ಧಾರ ನಡೆಸಲಾಗಿದ್ದು ಸುತ್ತುಪೌಳಿ, ತೀರ್ಥಬಾವಿ ಸಹಿತ ತಾಮ್ರದ ಹೊದಿಕೆಯಿರುವ ಶಿಲಾಮಯ ಗರ್ಭಗುಡಿ ನಿರ್ಮಾಣಗೊಂಡಿದೆ. ಕೃಷ್ಣಶಿಲೆಯ ಪಾಣಿಪೀಠದಲ್ಲಿ ಮಹಾಮ್ಮಾಯಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೇ 23ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮತ್ತು ಮೇ 29ರಂದು ಪ್ರತಿಷ್ಠೆ, ಬ್ರಹ್ಮಕಲಶ ನಡೆಯಲಿದೆ. ಪ್ರತಿದಿನ ವೈದಿಕ ವಿಧಿವಿಧಾನಗಳು, ಧಾರ್ಮಿಕ ಸಭೆ ನಡೆಯಲಿದ್ದು ನಾಡಿನ ಸಂತರು, ಯತಿವರೇಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಂಜುನಾಥ ವಿಟ್ಲ, ದಾಮೋದರ ಕಟ್ಟತ್ತಿಲ, ಯೋಗೀಶ ಕಾವು, ಅಣ್ಣು ನಾಯ್ಕ ಕೆಮ್ಮಾಯಿ, ಸದಾಶಿವ ನಾಯ್ಕ ಪುತ್ತೂರು, ವಾಣಿ ಕೇಶವ ದೈಪಲ ಮತ್ತಿತರರು ಉಪಸ್ಥಿತರಿದ್ದರು.