ಮಂಗಳೂರು: ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ದೇವಿ ಹಸ್ತಕ್ಕೆ ಬೆಳ್ಳಿಯ ವೀಣೆ ಸಮರ್ಪಣೆ

ಮಂಗಳೂರಿನ ಕೊಟ್ಟಾರದಲ್ಲಿರುವ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆ, ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜಾ, ಅಕ್ಷರಭ್ಯಾಸ ಪೂಜೆ, ಮಹಿಳಾ ಬೃಂದದಿಂದ ಸರಸ್ವತಿ ಕೀರ್ತನೆ, ಮೃತ್ಯುಂಜಯ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ಮಹಿಳಾ ವೃಂದದಿಂದ ಕುಂಕುಮರ್ಚನೆ ಸೇವೆ ಹಾಗೂ ಸಪ್ತಸ್ವರ ಬಳಗದವರಿಂದ ಭಕ್ತಿಗೀತೆ, ರಾತ್ರಿ ದಿನ ಅನ್ನ ಸಂತರ್ಪಣೆ ಬಹಳ ವಿಜೃಂಭಣೆಯಿಂದ ನೆರವೇರಿತು.

 ಶ್ರೀ ಕ್ಷೇತ್ರದ ಸಮಸ್ತ ಭಕ್ತರಿಂದ ನೀಡಿರುವ ಮೂರು ಅಡಿ ಉದ್ದದ  ಬೆಳ್ಳಿಯ ವೀಣೆಯನ್ನು ವಿದ್ಯಾ ಸರಸ್ವತಿ ದೇವಿಯ ಹತ್ತಕ್ಕೆ ಸಮರ್ಪಣೆ ಮಾಡಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಮ್ ಮಹೇಶ ಜೆ, ಯಶಶ್ವಿತಾ ಅಜಿತ್ ಸುವರ್ಣ, ರಾಮ ರಾವ್, ಅರ್ಚನಾ ಸುನಿಲ್ ಕಿಣಿ, ನಯನಾ ಮಲ್ಯ, ಪದ್ಮನಾಭ ಅಮೀನ್, ರವಿ ರಾಜ್ ಅಮೀನ್, ಭಾರತ್ ಕುಮಾರ್ ಕುಳೂರ್, ಕೇಶವ ಶ್ರೀಯಾನ್, ಕಾರ್ಪೊರೇಟರ್ ಜಯಲಕ್ಷ್ಮಿ ಶೆಟ್ಟಿ, ಎಂಸಿಸಿ ಸಹ ಇಂಜಿನಿಯರ್ ಪ್ರಿಯಾಂಕ, ಸುರೇಖಾ ಹೆಗ್ಡೆ, ಮಾಜಿ ಕಾರ್ಪೊರೇಟರ್  ನಾಗವೇಣಿ ದೇವದಾಸ್, ನರಸಿಂಹ ಮೂರ್ತಿ, ಚರಣ್ ಸುವರ್ಣ, ಶಿಲ್ಪಾ ರವಿಶಂಕರ್ ಶಾನಭಗ್ ಮೊದಲದವರು ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನವನ್ನು ನವೀನಚಂದ್ರ ಶ್ರೀಯಾನ್, ನಿಕಿತ್ ಎನ್ ಶ್ರೀಯಾನ್ ನೆರವೇರಿಸಿದರು, ತುಳಸಿ ಎನ್ ಶ್ರೀಯಾನ್ ಸಹಕರಿಸಿದರು.

Related Posts

Leave a Reply

Your email address will not be published.