ಲೀಲ ಕಿರಣ ಮರಣ

400 ಕನ್ನಡ, ಇತರ ಭಾಷೆಯ 200 ಎಂದು 600ರರಷ್ಟುಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ಲೀಲಾವತಿಯವರು ಡಿಸೆಂಬರ್ 8ರಂದು ಬೆಂಗಳೂರು ಹೊರ ವಲಯದ ನೆಲಮಂಗಲದ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಮೂಲ ಹೆಸರು ಲೀಲ ಕಿರಣ. 1937 ರಲ್ಲಿ ಹುಟ್ಟಿದ ಇವರು ಬಾಸೆಲ್ ಮಿಶನರಿಗೆ ಸೇರಿದ ಅಚ್ಚ ತುಳು ಮಾತಿನವರು. 6ರ ಪ್ರಾಯದಲ್ಲಿ ಹೆತ್ತವರನ್ನು ಕಳೆದುಕೊಂಡ ಮಂಗಳೂರು ಬಾಲಕಿ. ನಟನೆಯ ಸೆಳೆತಕ್ಕೆ ಸಿಲುಕಿ ಮೈಸೂರು ಸೇರಿದರು.

ಚಂಚಲ ಕುಮಾರಿ ಸಿನಿಮಾದ ಸಣ್ಣ ಪಾತ್ರದಿಂದ ತೊಡಗಿ ಹತ್ತಾರು ಚಿತ್ರಗಳಲ್ಲಿ ಸಣ್ಣ ಪಾತ್ರಗಳ ಮಿತಿ ಗತಿ. ತುಳವರಾದ ಮಹಾಲಿಂಗ ಭಾಗವತರ್ ಅವರ ನಾಟಕ ಕಂಪೆನಿ ಸೇರಿ ರಂಗ ಸೇವೆ ಆರಂಭಿಸಿದರು. ಮುಂದೆ ಮಹಾಲಿಂಗ ಭಾಗವತರ್ ಅವರನ್ನೇ ಮದುವೆಯಾದರು. ವಿನೋದ್ ರಾಜ್ ಮಹಾಲಿಂಗ ಭಾಗವತರ್ ಮತ್ತು ಲೀಲಾವತಿ ದಂಪತಿಯ ಮಗ ಎನ್ನುವುದು ಚಿತ್ರ ರಂಗದ, ನಾಟಕ ರಂಗದ50, 60ರ ದಶಕದ ಸಂಪರ್ಕ ಇರುವ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಭಾಗವತರ್ ಕಂಪೆನಿ ನಷ್ಟ ಕಂಡಿತು. ಸಿನಿಮಾಗಳಲ್ಲಿ ಸಣ್ಣ ಸಖಿ ಪಾತ್ರ, ಹಾಸ್ಯ ಪಾತ್ರ, ಹಾಸ್ಯಾಸ್ಪದ ಪಾತ್ರಗಳು ಸಿಗುತ್ತಿದ್ದವು. ಭಾಗವತರ್ ಮತ್ತು ಲೀಲ ಕಿರಣ ಇಬ್ಬರೂ ಸುಬ್ಬಯ್ಯ ನಾಯ್ಡು ಅವರ 1958ರ ಭಕ್ತ ಪ್ರಹ್ಲಾದದಲ್ಲಿ ನಟಿಸಿದ ಬಳಿಕ ನಾಯ್ಡು ಅವರ ಕಂಪೆನಿಗೇ ಸೇರಿದರು. ಅಲ್ಲೇ ಅವರು ಮದುವೆ ಆದರು ಎಂದು ಆ ಕಂಪೆನಿಯ ಹಳೆಯ ತಲೆಗಳು ಹೇಳುತ್ತವೆ.

ನಾಟಕ ಸಂಪರ್ಕದಿಂದ ರಣಧೀರ ಕಂಠೀರವದಲ್ಲಿ ಎರಡನೆಯ ನಾಯಕಿಯಾದ ಲೀಲ ಕಿರಣರ ಹೆಸರು ಲೀಲಾವತಿ ಆಯಿತು. ರಾಣಿ ಹೊನ್ನಮ್ಮದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾದ ಮೇಲೆ ಲೀಲಾವತಿ ತಿರುಗಿ ನೋಡಲಿಲ್ಲ. ಎರಡು ದಶಕ ಕಾಲ ನಾಯಕಿಯಾಗಿದ್ದು ಆಮೇಲೆ ಪೋ?ಕ ನಟಿಯಾಗಿ ಒಟ್ಟು ಐದು ದಶಕಗಳ ಕಾಲ ಚಿತ್ರ ರಂಗದಲ್ಲಿ ಇದ್ದರು.

ಡಾ. ರಾಜಕುಮಾರ್‌ರವರ ಜೊತೆಗೆ ನಾಯಕಿಯಾಗಿ ಅವರು ನಟಿಸಿದ್ದ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ, ಸಂತ ತುಕಾರಾಂ, ಸಿಪಾಯಿ ರಾಮು ಮೊದಲಾದವು ಲೀಲಾವತಿ ಅವರ ಅಭಿನಯ ಪ್ರತಿಭೆ ನೆನಪಿಸುವ ಕೆಲವು ಚಿತ್ರಗಳು. ವರನಟ ಡಾ.ರಾಜಕುಮಾರ್‌ರವರ ತಂಗಿಯಾಗಿ ವಾತ್ಸಲ್ಯ, ಮಗಳಾಗಿ ಭೂದಾನ, ಅತ್ತಿಗೆಯಾಗಿ ಪ್ರೇಮಮಯಿ, ಅತ್ತೆಯಾಗಿ ನಾ ನಿನ್ನ ಮರೆಯಲಾರೆ, ಅಲ್ಲದೆ ನಾದಿನಿ, ಸಣ್ಣ ಪಾತ್ರ ಎಂದು ಮೊದಲಾದ ಬಗೆಯಲ್ಲೂ ಲೀಲಾವತಿ ಅವರು ನಟಿಸಿದ್ದಾರೆ.

ಲೀಲಾವತಿ ಮಣ್ಣಿನ ಮಗಳು. 1969ರ ಸುತ್ತಿನಲ್ಲಿ ಮದರಾಸು ಹೊರ ವಲಯದ ತೋಟದಲ್ಲಿ ತಾನು ಬೆಳೆದ ಇಂಗಿನ ಅಂಟು ತೋರಿಸುವುದು ಅವರ ಹೆಮ್ಮೆಯ ವಿಷಯವಾಗಿತ್ತು. ಮುಂದೆ ಬೆಂಗಳೂರಿನ ನೆಲಮಂಗಲದ ಬಳಿಯೂ ತೋಟದ ಮನೆ ಮಾಡಿದರು. 2004ರ ಸುತ್ತಿನಲ್ಲಿ ವಿನೋದ್ ರಾಜ್ ಚಿತ್ರ ರಂಗದಲ್ಲಿ ಇದ್ದುದರಿಂದ ಬೆಂಗಳೂರು ಕಾಫಿ ಬೋರ್ಡ್ ಬಳಿಯ ಶ್ಯಾಮ್ ಪ್ರಸಾದ್ ಹೋಟೆಲಿನಲ್ಲಿ ವಾಸಿಸುತ್ತಿದ್ದರು. ಆಗಲೆ ವಿನೋದ್ ಗುಟ್ಟಿನ ಮದುವೆ ಆಗಿದ್ದದು. ಆ ಹೋಟೆಲ್ ಜಾಗ ಮಾರಿದ್ದರು. ಚೆನ್ನೈ, ನೆಲಮಂಗಲದಲ್ಲಿ ಮನೆ ತೋಟ ಇದ್ದರೂ ಕೋಣೆ ಬಿಡಲು ಒಪ್ಪದ ಲೀಲಾವತಿಯವರು ನನಗೆ ನೆಲೆ ಇಲ್ಲ ಎಂದು ಮಾಧ್ಯಮದೆದುರು ಅತ್ತಿದ್ದರು. ಕೆಲವು ಪತ್ರಕರ್ತರು ನೆಲಮಂಗಲದ ಲೀಲಾವತಿಯವರ ತೋಟದ ಮನೆಗೆ ಹೋಗಿ ಕವಳ ಕತ್ತರಿಸಿ ಬಂದು ಬರೆದಿದ್ದರು.

ವಿನೋದನನ್ನು ವಿನೋದ್ ರಾಜ್ ಮಾಡಿದ್ದು ಅಡ್ಡ ದಾರಿಯ ದ್ವಾರಕೀಶ್. ವಿನೋದ್ ರಾಜ್ ರಾಜಕುಮಾರ್ ಮಗ ಎಂದು ಕೊರೆದದ್ದು ರವಿ ಬೆಳಗೆರೆ ಎನ್ನುವ ಮಿಶ್ರ ತಳಿ. ಬನ್ನಂಜೆ ಗೋವಿಂದಾಚಾರ್ಯರ ಮಗಳು ಮತ್ತು ದಿವಂಗತ ಸಾಹಿತಿ ಸತ್ಯಕಾಮರ ಮದುವೆ ಇಲ್ಲದ ಬಂಧವನ್ನು ತಂತ್ರಯೋಗ, ದೈವ ಯೋಗ ಎಂದು ಇತ್ಯಾದಿಯಾಗಿ ರವಿ ಬೆಳಗೆರೆ ಪುಸ್ತಕ ಬರೆಸಿದ್ದಾನೆ. ಶೂದ್ರರ ಮದುವೆ ರಹಿತ ಸಂಬಂಧವನ್ನು ಕೆಟ್ಟದ್ದಾಗಿ ವರ್ಣಿಸಿದ್ದಾನೆ. ಸಿನಿಮಾ ರಂಗದಲ್ಲಿ ನಾಯಕ ನಾಯಕಿಯರ ದೈಹಿಕ ಸಂಬಂಧ ಹೊಸತೂ ಅಲ್ಲ; ಗೊತ್ತಿಲ್ಲದೆ ಇರುವ ವಿಷಯವೂ ಅಲ್ಲ.

ಹಿಂದೂನೇಶನ್ ಎಂಬ ಪತ್ರಿಕೆ ಐದಾರು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. ನಟ ನಟಿಯರು ಯಾವ ಲಾಡ್ಜ್‌ನಲ್ಲಿ ಇದ್ದರು ಎಂದು ಬರೆಯುವುದೇ ಅದರ ವರದಿಯಾಗಿತ್ತು. ಇದಕ್ಕೇ 1944ರಲ್ಲಿ ಅದರ ಸಂಪಾದಕ ಲಕ್ಷ್ಮೀಕಾಂತ್ ಕೊಲೆ ಆಗಿತ್ತು. ಈ ಪ್ರಕರಣದಲ್ಲಿ ತಮಿಳು ನಾಯಕ ನಟ ತ್ಯಾಗರಾಜ ಭಾಗವತರ್ ಜೈಲಿಗೆ ಹೋದುದರಿಂದ ಕನ್ನಡದ ಹೊನ್ನಪ್ಪ ಭಾಗವತರ್ ಅಲ್ಲಿ ಸಾಕಷ್ಟು ಅವಕಾಶ ಪಡೆದರು. 1968ರಲ್ಲಿ ಲೀಲಾವತಿ ನಾಟಕದಲ್ಲಿ ನಟಿಸಲು ಗಂಗಾವತಿಗೆ ಬಂದಿದ್ದರು. ಅಲ್ಲಿನ ರಾಜಕೀಯ ನಾಯಕ ದಿವಂಗತ ಶ್ರೀರಾಮುಲು ಅವರು ನಟಿಯನ್ನು ಊಟಕ್ಕೆ ಕರೆದಿದ್ದರು. ಎರಡೇ ದಿನದಲ್ಲಿ ಮದರಾಸಿನಿಂದ ಹೊರಡುತ್ತಿದ್ದ ಕನ್ನಡ ಹಿಂದೂನೇಶನ್‌ನಲ್ಲಿ ಅದು ರಂಗುರಂಗಾಗಿ ವರದಿಯಾದುದು ಹಲವರ ಅಚ್ಚರಿಗೆ ಆಗ ಕಾರಣವಾಗಿತ್ತು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.