ಮಂಗಳೂರಿನ ಗರೋಡಿಯಲ್ಲಿ ನೂತನ ಶಿವಡೆಕೋರ್ ಶುಭಾರಂಭ

ಮಂಗಳೂರಿನ ಗರೋಡಿ ಸಮೀಪದಲ್ಲಿ ನೂತನ ಶಿವಡೆಕೋರ್ ಪ್ಲೈ ಲ್ಯಾಮಿನೇಟ್ಸ್ ಡಿವಿಜನ್ ಶುಭಾರಂಭಗೊಂಡಿತು.
ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ನೂತನ ಶಿವಡೆಕೋರ್ ಪ್ಲೈ ಲ್ಯಾಮಿನೇಟ್ಸ್ ಡಿವಿಜನ್ ಅನ್ನು ಉದ್ಘಾಟಿಸಿದರು. ತದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಿಕಾಸ ಪ್ಲೈಯನ್ನು ಶಾಸಕರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕರು.ಮಂಗಳೂರು ನಗರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಹಾಗಾಗಿ ಇಂತಹ ಉದ್ದಿಮೆಗಳು ನಗರಕ್ಕೆ ಇನ್ನಷ್ಟು ಸಹಕಾರಿಯಾಗಲಿದೆ. ನೂತನ ಉದ್ದಿಮೆಗಳು ವಿನೂತನ ರೀತಿಯಲ್ಲಿ ಕೊಡುಗೆ ನೀಡಿದಾಗ ಜನರು ಕೂಡ ಪ್ರೋತ್ಸಾಹ ಮಾಡುತ್ತಿದ್ದಾರೆ. ಜೊತೆಗೆ ಪವನ್ ಕುಮಾರ್ ಅವರು ಹತ್ತಾರು ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿ, ತನ್ನ ಊರಿನಲ್ಲಿ ಉದ್ದಿಮೆಯನ್ನ ಪ್ರಾರಂಭಿಸಿ ಹಲವಾರು ಮಂದಿಗೆ ಉದ್ಯೋಗ ದೊರೆಕಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಆಳ್ವಾ ಮಾತನಾಡಿ, ಉದ್ದಿಮೆ ಜೊತೆಯಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪವನ್ ಕುಮಾರ್ ಅವರ ಕಾರ್ಯ ಶಾಘ್ಲನೀಯ, ಮುಂದಿನ ದಿನಗಳಲ್ಲಿ ಈ ಉದ್ದಿಮೆ ಯಶಸ್ಸು ಕಾಣುವ ಮೂಲಕ ಹತ್ತಾರು ಮಂದಿಗೆ ಸಹಕಾರ ಆಗಲಿ ಎಂದು ಹೇಳಿದರು.

ಇದೇ ವೇಳೆ ಸಂಸ್ಥೆಯ ಮಾಲಕರಾದ ಪವನ್ ಕುಮಾರ್ ಮುಂದಾಳತ್ವದಲ್ಲಿ ಫಲಾನುಭವಿಗಳಿಗೆ ಸಹಾಯಹಸ್ತ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮತ್ತು ಆರ್ಥಿಕ ನೆರವು ನೀಡಲಾಯ್ತು.
ಈ ವೇಳೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ, ಕಿಶೋರ್ ಕೊಟ್ಟಾರಿ, ಲೋಟಸ್ ಪ್ರಾಪರ್ಟಿಸ್‌ನ ವ್ಯವಸ್ಥಾಪಕ ಪಾಲುದಾರರಾದ ಸಂಪತ್ ಶೆಟ್ಟಿ, ಐಐಎ ಮಾಜಿ ಚೇರ್‍ಮೆನ್ ಎಂ ವೆಂಕಟೇಶ್ ಪೈ, ಸಂಸ್ಥೆಯ ಸ್ಥಾಪಾಧ್ಯಕ್ಷ ಚಂದ್ರಶೇಖರ್, ಸಂಸ್ಥೆಯ ಮಾಲಕರಾದ ಪವನ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಚೇತನ್ ಅವರು ನಡೆಸಿಕೊಟ್ಟರು. ಶಿವಡೆಕೋರ್ ಪ್ಲೈ ಲ್ಯಾಮಿನೇಟ್ಸ್ ಡಿವಿಜನ್‌ನಲ್ಲಿ ಫ್ಲೈವುಡ್, ವೆನೀರ್ ಆಂಡ್ ಲ್ಯಾಮಿನಟ್ಸ್ , ಅಲ್ಯೂಮೀನಿಯಂ ಸೆಕ್ಷನ್ಸ್, ಎಸಿಪಿ ಸೀಟ್ಸ್ , ಪಿವಿಎಸ್ ಸೀಲಿಂಗ್ & ಡೋರ್‍ಸ್, ಜಿಪ್ಸಮ್ ಬೋರ್ಡ್ ಇಲ್ಲಿ ಲಭ್ಯವಿದೆ. ಇನ್ನು ಪ್ರತಿಷ್ಠಿತ ಕಂಪಮಿಗಳಾದ ಸೋನಾಲಿ ಎಸ್ಟ್ರುಸಿಯನ್ಸ್, ಸ್- ಡೇಕೊರ್, ಆಲ್ಡೂರಾ ಅಲ್ಯೂಮೀನಿಯಂ, ಲೆಕ್ಸಾ, ವಿವಾ, ಗ್ರೀನ್ಲಂ ಲಾಮಿನಟ್ಸ್, ಆಪಲ್ ಮತ್ತಿತರ ಪ್ರತಿಷ್ಠಿತ ಕಂಪನಿಗಳ ಫ್ಲೈವುಡ್‌ಗಳನ್ನು ಮಾರಾಟ ಮಾಡಲಾಗುತ್ತದೆ. ನಗರದ ಗರೋಡಿಯ ಸಮೃದ್ಧಿ ಭವನ ಪಕ್ಕದಲ್ಲಿರುವ ಶಿವಡೆಕೋರ್ ಪ್ಲೈ ಲ್ಯಾಮಿನೇಟ್ಸ್ ಡಿವಿಜನ್ ವಿಶಾಲವಾದ ವಿಸ್ತೀರ್ಣದಲ್ಲಿ ನೂತನ ಶೋರೂಂ ಪ್ರಾರಂಭವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9845023464