ಮಂಗಳೂರು : ಆ.8ರಂದು ಪರಮಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ…!

ಮಂಗಳೂರು ; ಪರಮಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಗ್ರಾಮೋತ್ಸವದ ಪ್ರಯುಕ್ತ 2001ರಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, 2025ರ ಗ್ರಾಮೋತ್ಸವದ ಕಾರ್ಯಕ್ರಮಗಳು ದಿನಾಂಕ 08.08.2025ರಂದು ಶ್ರೀ ಸಂಸ್ಥಾನದಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜರಗಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಸುರೇಶ್ ರೈ ಯವರುವ ತಿಳಿಸಿದ್ದಾರೆ.

ಗ್ರಾಮೋತ್ಸವದ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಭಾಗಗಳಲ್ಲಿ ವೈದ್ಯಕೀಯ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಸ್ವಚ್ಚತಾ ಕಾರ್ಯಕ್ರಮವು ರಜತ ಸಂಭ್ರಮವನ್ನು ಆಚರಿಸುತ್ತಿರುವ ಈ ವರ್ಷ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ 65 ಸ್ಥಳಗಳಲ್ಲಿ ಏಕಕಾಲದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ “ಬೃಹತ್ ಸ್ವಚ್ಚತಾ ಅಭಿಯಾನ” ವನ್ನು ದಿನಾಂಕ 03.08.2025ನೇ ಆದಿತ್ಯವಾರದಂದು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಲೋಕನಾಥ ಶೆಟ್ಟಿ ತಾಳಿಪಾಡಿಗುತ್ತು, ಸಿ.ಎ ರಾಮ್ ಮೋಹನ್ ರೈ, ಲಿಂಗಪ್ಪ ಗೌಡ ಪನಿಯಡ್ಕ, ಮಾತೇಶ್ ಭಂಡಾರಿಯವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.