ಮಂಗಳೂರು: ಕಾವೂರಿನಲ್ಲಿ ಮಾರುಕಟ್ಟೆ ಸಂಕೀರ್ಣ ಖಾಲಿ: ಅಂಗಡಿ ಪಡೆದ ವ್ಯಾಪಾರಸ್ಥರು ವಾರದೊಳಗೆ ಸ್ಥಳಾಂತರಗೊಳ್ಳಬೇಕು: ಮೇಯರ್ ಸುಧೀರ್

ಕಾವೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಿಂದ ನಿರ್ಮಿಸಲಾದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾರುಕಟ್ಟೆಯ ಸಂಕೀರ್ಣ ಖಾಲಿ ಬಿದ್ದಿದ್ದು, ಅಂಗಡಿ ಪಡೆದ ವ್ಯಾಪಾರಸ್ಥರು ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಕಾವೂರಿನಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ ಸಂಕೀರ್ಣವನ್ನು ಅವರು ವೀಕ್ಷಿಸಿ, ಮಾಧ್ಯಮದೊಂದಿಗೆ ಮಾತನಾಡಿದರು. ಉತ್ತಮವಾದಂತ ಮೀನು ಮಾರುಕಟ್ಟೆ ಅತ್ಯಾಧುನಿಕ ಸೌಲಭ್ಯಗಳನ್ನ ನೀಡಲಾಗಿದ್ದರೂ, ಕಾವೂರು ಜಂಕ್ಷನ್ ನಲ್ಲಿ ಅದರಲ್ಲೂ ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಸರಿಯಾದ ಕ್ರಮವಲ್ಲ.

ಒಂದು ಬಾರಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರವಾದರೆ ಗ್ರಾಹಕರು ಕೂಡ ಖಂಡಿತ ಬರುತ್ತಾರೆ. ರಸ್ತೆ ಬದಿ ವಾಹನದಲ್ಲಿ ಮೀನು ಮಾರಾಟ ಮಾಡುವುದನ್ನು ಕೂಡ ನಿಯಂತ್ರಣ ಮಾಡಲಾಗುವುದು. ಮಾರುಕಟ್ಟೆ ಸಂಕಿರಣದಲ್ಲಿ ಯಾರೆಲ್ಲ ಅಂಗಡಿಯನ್ನು ಪಡೆದಿದ್ದಾರೆ ಅವರೆಲ್ಲ ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು.ಈ ಕುರಿತು ನೋಟೀಸ್ ನೀಡಲಾಗುತ್ತದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವಧಿ ನೀಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತಮಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಸುಮಂಗಳ ರಾವ್ ಬಿಜೆಪಿ ಮುಖಂಡ ರಣದೀಪ್ ಕಾಂಚನ್ ಸೀತೇಶ್ ಕೊಂಡೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.