ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ “ವೃದ್ಧಿ” ಯೋಜನೆ
ಮಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಹಿರಿಯರ ಜೀವನದಲ್ಲಿ ಹೊಸ ಚೈತನ್ಯ ಮತ್ತು ಭರವಸೆ ಮೂಡಿಸುವ ನಿಟ್ಟಿನಲ್ಲಿ “ವೃದ್ಧಿ” – ಹಿರಿಯರ ಅಭಿವೃದ್ಧಿ ಯೋಜನೆಯ ಉದ್ಘಾಟನೆಯನ್ನು ಅಕ್ಟೋಬರ್ 03ರಂದು ಬೆಳಿಗ್ಗೆ 10 ಗಂಟೆಗೆ, ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‍ನಲ್ಲಿ ಹಮ್ಮಿಕೊಂಡಿದೆ.
ವಯೋವೃದ್ಧರ (60 ವರ್ಷ ಮೇಲ್ಪಟ್ಟ) ಆರೈಕೆ, ಅವರ ಆರೋಗ್ಯದ ಬಗ್ಗೆ ಜಾಗೃತಿ, ಅವರ ಜೀವನಕ್ಕೆ ಸಂತೋಷದಾಯಕ ವೇದಿಕೆಯನ್ನು ಕಲ್ಪಿಸುವುದು ಹಾಗೂ ನಿರಂತರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಡುವುದು “ವೃದ್ಧಿ” ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಯೋಜನೆಯು ವಯಸ್ಸಾದವರ ಸಮಗ್ರ ಆರೈಕೆಯ ಮೇಲೆ ಕೇಂದ್ರೀಕೃತವಾಗಿದ್ದು ಹಿರಿಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.
ವೃದ್ಧಿ ಯೋಜನೆಯ ಮಾಸಿಕ ಕಾರ್ಯಕ್ರಮವು ಪ್ರತಿ ತಿಂಗಳ ಎರಡನೇ ಬುಧವಾರ ಬೆಳಗ್ಗೆ 10:00 ರಿಂದ 12:00ರ ವರೆಗೆ ನಡೆಯಲಿರುವುದು. ಆಸ್ಪತ್ರೆಯಲ್ಲಿ ನಡೆಯುವ ಉದ್ಘಾಟನೆಗೆ ಮಾಧ್ಯಮಗಳನ್ನು ಆಹ್ವಾನಿಸುತ್ತೇವೆ. ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವನ್ನು ಪಡೆದುಕೊಳ್ಳಲು ಎಂ.ಸಿಹೆಚ್ (ಯುರಾಲಜಿ) ಮೆಡಿಕಲ್ ಡೈರೆಕ್ಟರ್ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ರೊಬಾಟಿಕ್ ಹಾಗು ಟ್ರಾನ್ಸ್‍ಪ್ಲಾಂಟ್ ಶಸ್ತ್ರಚಿಕಿತ್ಸಕ ಆಗಿರುವ ಡಾ. ಪ್ರಶಾಂತ್ ಮಾರ್ಲ ಕೆ ಇವರು ಕೇಳಿಕೊಂಡಿದ್ದಾರೆ.