ಮಂಗಳೂರು: ಬಿಎಂಆರ್ ಗೋಲ್ಡ್ ಸ್ಕೀಮ್ ಸೀಸನ್-4, ಬಂಪರ್ ಡ್ರಾ ಕಾರ್ಯಕ್ರಮ
ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಗೋಲ್ಡ್ ಸ್ಕೀಮ್ ಸೀಸನ್-4ರ ಬಂಪರ್ ಡ್ರಾ ಕಾರ್ಯಕ್ರಮವು ಚೊಕ್ಕಬೆಟ್ಟುವಿನ ಎಮ್‍ಜೆಎಮ್ ಹಾಲ್‍ನಲ್ಲಿ ನಡೆಯಿತು.
ಬಿಎಂಆರ್ ಗ್ರೂಫ್ ವತಿಯಿಂದ ಬಿಎಂಆರ್ ಗೋಲ್ಡ್ ಸ್ಕೀಮ್‍ನ ಜನತೆಗಾಗಿ ಲಕ್ಕಿ ಡ್ರಾ ಮೂಲಕ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ. ಮೊದಲನೇ ತಿಂಗಳ ಡ್ರಾ ಕಾರ್ಯಕ್ರಮವು ಚೊಕ್ಕಬೆಟ್ಟುವಿನ ಎಮ್‍ಜೆಎಮ್ ಹಾಲ್‍ನಲ್ಲಿ ನಡೆಯಿತು. ಅದೃಷ್ಟಶಾಲಿಗಳಾದ 5 ಮಂದಿಗೆ ಆಕ್ಟಿವಾ ವಾಹನ ಮತ್ತು ಒಬ್ಬರಿಗೆ 2 ಬಿಹೆಚ್‍ಕೆ ಸುಂದರವಾದ ಮನೆಯನ್ನು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಲಕ್ಕಿ ಡ್ರಾದ ಮೂಲಕ ಕಲ್ಪಿಸಿದ್ದಾರೆ.
ಲಕ್ಕಿ ಡ್ರಾ ಕಾರ್ಯಕ್ರಮಕ್ಕೆ ನಟ ಸತೀಶ್ ಬಂದಲೆ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬಿಎಂಆರ್ ಗ್ರೂಪ್‍ನ ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸಿದ ಅವರು, ಇನ್ನಷ್ಟು ಕಾರ್ಯಕ್ರಮಗಳು ನಡೆದು ಬಿಎಂಆರ್ ಸಂಸ್ಥೆಯ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದರು. ಬಿಎಂಆರ್ ಗ್ರೂಫ್‍ನ ಚೇರ್‍ಮೆನ್ ಇಬ್ರಾಹಿಂ ಅವರು ಮಾತನಾಡಿ, ಬಿಎಂಆರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದೇವೆ. ಇದೀಗ ಬಡ ಜನರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಲಕ್ಕಿ ಡ್ರಾದ ಮೂಲಕ ಅನೇಕ ಕೊಡುಗೆಗಳನ್ನು ಕೊಡಲು ಮುಂದಾಗಿದ್ದೇವೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಪೊಲೀಸ್ ಅಧಿಕಾರಿ ವಿಜಯ್ ಕಾಂಚನ್, ಅಬ್ದುಲ್ ಕರೀಂ ಬ್ಯಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರೀನ್ ಸ್ಟಾರ್ ಕೃಷ್ಣಾಪುರ ಅಧ್ಯಕ್ಷರಾದ ಇಸ್ಮಾಯಿಲ್ ಬದ್ರಿಯಾ, ವಕೀಲರಾದ ಝಿಶಾನ್ ಆಲಿ, ಆಶ್ಪಕ್ ಅಹಮ್ಮದ್ ಕಾಟಿಪಳ್ಳ, ಉದ್ಯಮಿಗಳಾದ ಅಶ್ರಫ್, ಅನ್ವರ್ ಹಸನ್, ಅಬೂಬಕ್ಕರ್ ಸಿದ್ಧಿಕ್ ಉಪಸ್ಥಿತರಿದ್ದರು.