ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಮಂಗಳೂರು ತಾಲೂಕು ಪಣಂಬೂರು ಠಾಣಾ ವ್ಯಾಪ್ತಿಯ ಪಣಂಬೂರು ಕಡಲ ಕಿನಾರೆ ಬ್ರೇಕ್ ವಾಟರ್ ಬಳಿ ಸಮುದ್ರದ ದಡದಲ್ಲಿ ಜ.೧೬ರಂದು ಬೆಳಿಗ್ಗೆ ೬.೩೦ಕ್ಕೆ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ. ಮೃತರ ವಾರಿಸುದಾರರು ಪತ್ತೆಯಾಗದೆ ಇರುವುದರಿಂದ ಮೃತದೇಹವನ್ನು ಮಂಗಳೂರಿನ ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗಂಡಸಿನ ಪ್ರಾಯ ಸುಮಾರು55-60 ವರುಷ. ಎತ್ತರ ಸುಮಾರು 5.5 ಅಡಿ. ಮೈಯಲ್ಲಿ ಯಾವುದೇ ಬಟ್ಟೆಗಳು ಇರುವುದಿಲ್ಲ
ದೃಡಕಾಯ ಶರೀರ, 3 ಇಂಚು ಉದ್ದ ಬಿಳಿ ತಲೆ ಕೂದಲು, ಬಿಳಿ ಬಣ್ಣದ ಮೀಸೆ ಮತ್ತು ಗಡ್ಡ ಇರುತ್ತದೆ. ಕಣ್ಣುಗಳು ಊದಿಕೊಂಡಿರುತ್ತದೆ. ಮೈಕೈ ಚರ್ಮ ಕಿತ್ತು ಹೋಗಿದ್ದು, ಮತ್ತು ನಾಲಿಗೆ ಹೊರಬಂದಿದ್ದು, ಕೊಳೆತ ಸ್ಥಿತಿಯಲ್ಲಿದ್ದು, ಮುಖ ಮತ್ತು ದೇಹ ಊದಿಕೊಂಡಿದೆ.
ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆ 0824-2220530, 9480805355 ಮಾಹಿತಿ ನೀಡಿ


















