ಜಾಗತಿಕ ಮೀನು ಕ್ಷಾಮಕ್ಕೆ ಮಂಗಳೂರು ಮುನ್ನುಡಿ

ವಿಶ್ವ ಸಂಸ್ಥೆಯು 2055ಕ್ಕೆ ಜಗತ್ತು ಮೀನಿನ ಕ್ಷಾಮ ಎದುರಿಸಲಿದೆ ಎಂದು ಎಚ್ಚರಿಸಿತ್ತು. ಆ ಬಗೆಗೆ ಎಚ್ಚರಿಸಿ ಆಗಲೇ ಲೇಖನ ಬರೆಯಲಾಗಿದೆ. ಈಗ ಮೀನಿನ ಕ್ಷಾಮವು ತುಳುನಾಡನ್ನು ಸಮೀಪಿಸಿದೆ.

ಮೀನು ಬರಕ್ಕೆ ಕಾರಣವೇನು? ಅತಿ ಮೀನುಗಾರಿಕೆ, ಮಾಲಿನ್ಯ, ಮೀನು ಆವಾಸದ ನೆಲೆ ನಾಶ, ಹವಾಮಾನ ಬದಲಾವಣೆ ಇವೆಲ್ಲ ಕಾರಣಗಳಿವೆ. ಈಗ ಭೂಬಿಸಿಯ ಗುಮ್ಮ ಒಳತೂರಿದೆ.

ಈಗಾಗಲೇ ಲೋಕದ 80% ಮೀನುಗಾರಿಕೆಯು ಶೋಷಣೆಗೊಂಡಿದೆ, ಬರಿದಾಗಿದೆ, ಇನ್ನೇನು ಮುಚ್ಚುವ ಹಂತ ಮುಟ್ಟಿದೆ.
ಜಗತ್ತಿನೆಲ್ಲೆಡೆ ಬೇಟೆ ಊಟದ ತಾಟೆ ಬಲ್ಯಾರ್ ಜಾತಿ, ಟ್ಯೂನಾ, ಮೆರ್ಲಿನ್, ತಲವಾರು ಮೀನುಗಳು ಈಗಾಗಲೇ 90% ನಾಶವಾಗಿವೆ. ಭೂಬಿಸಿಯ ಕಾರಣಕ್ಕೆ ಉಷ್ಣವಲಯದ 40% ಮೀನುಗಳು ಮುಂದಿನ ಅರ್ಧ ಶತಮಾನದಲ್ಲಿ ಇಲ್ಲವಾಗುವವು.

ಇದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರಮುಖ ಆಹಾರ, ಪ್ರೋಟೀನ್ ಮೂಲವನ್ನು ಕಳೆದುಕೊಳ್ಳುವವು. ಕೋಟಿಗಟ್ಟಲೆ ಜನರು ಕೆಲಸ ಮತ್ತು ಹಣಕಾಸು ನಷ್ಟ ಹೊಂದುವರು. 2048 ಒಂದು ಎಚ್ಚರಿಕೆಯ ಕೊನೆಯ ಕಾಲ. ಅಲ್ಲಿಗೂ 2050ಕ್ಕೆ 1 ಕೋಟಿ ಟನ್ ಮೀನು ಹಿಡಿಯುವ ಆಸೆ ಲೋಕದ ಮೀನುಗಾರರದು. ಸಿಹಿನೀರಿನ ಮೀನು ಸಾಕುವಿಕೆ ಒಂದು ಮಟ್ಟದ ಪರಿಹಾರ ಒದಗಿಸುವ ಭರವಸೆ ಇದೆ.

Related Posts

Leave a Reply

Your email address will not be published.