ನ. 25 ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳ ಕ್ರೀಡೆಗಾಗಿ ಕೋಣಗಳನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ಯುವ ಕಾರ್ಯಕ್ರಮ ಉಪ್ಪಿನಂಗಡಿಯಿಂದ ಇಂದು ಆರಂಭಗೊಂಡಿದೆ.

ಉಪ್ಪಿನಂಗಡಿಯ ಜೂನಿಯರ್ ಕಾಲೇಜು ಮೈದಾನದಿಂದ ನಿರ್ಗಮನ ಕಾರ್ಯಕ್ರಮ ನಡೆಯಿತು. ಸುಮಾರು 150 ಜೋಡಿ ಕೋಣಗಳನ್ನು ಕರಾವಳಿಯ ನಾನಾ ಭಾಗಗಳಿಂದ ಉಪ್ಪಿನಂಗಡಿಗೆ ಕರೆತಂದು ಇಲ್ಲಿಂದ ಲಾರಿಗಳಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರತೀ ಜೋಡಿ ಕೋಣಕ್ಕೆ ಒಂದು ಲಾರಿಯನ್ನು ನಿಗದಿ ಮಾಡಲಾಗಿದೆ.

ಕೋಣಗಳು ನಿರ್ಗಮಿಸುವ ಸಂದರ್ಭ ಮಂಗಳವಾದ್ಯ, ಕೊಂಬು, ಕಹಳೆಗಳ ಅಬ್ಬರದೊಂದಿಗೆ ಭವ್ಯವಾಗಿ ಅವುಗಳನ್ನು ಬೀಳ್ಕೊಡಲಾಯಿತು. ಕೋಣಗಳಿಗೆ ಬೇಕಾದ ನೀರು, ಆಹಾರವನ್ನು ಆಯಾ ಲಾರಿಗಳಲ್ಲೇ ಒಯ್ಯಲಾಗುತ್ತಿದೆ. ಪ್ರತೀ ಕೋಣಗಳ ಓಟಗಾರರು, ಪರಿಚಾರಕರ ತಂಡಗಳು ಕೂಡ ಜತೆಯಲ್ಲೇ ಸಾಗಲಿದೆ.ಜೊತೆಗೆ ಪಶು ವೈದ್ಯಕೀಯ ತಜ್ಞರು, ನೀರಿನ ಟ್ಯಾಂಕರ್‍ಗಳು ಸೇರಿದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ನೆಲ್ಯಾಡಿ, ಗುಂಡ್ಯ, ಸಕಲೇಶಪುರ ಮೂಲಕ ಲಾಗುವ ಕೊಣಗಳಿಗೆ ಹಾಸನದಲ್ಲಿ ವಿಶ್ರಾಂತಿ ನೀಡಲಾಗುತ್ತದೆ.

ಅಲ್ಲಿಂದ ಮತ್ತೆ ಪ್ರಯಾಣವನ್ನು ಮತ್ತೆ ಮುಂದುವರೆಸಲಾಗುತ್ತದೆ. ಘಾಟಿ ಪ್ರದೇಶದವಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ.ಆದರೂ ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೆÇಲೀಸರು ಹಾಗೂ ಆಯಾ ಪ್ರದೇಶಗಳ ಪೆÇಲೀಸರು ಸಂಪೂರ್ಣ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

Related Posts

Leave a Reply

Your email address will not be published.