ಮಂಗಳೂರು: ಸೆ.27ರಿಂದ 30ರ ವರೆಗೆ ದಿ. ಲೋಕನಾಥ್ ಬೋಳಾರ್ ಸ್ಮರಣಾರ್ಥ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ, ಆಮಂತ್ರಣ ಪತ್ರಿಕೆ ಬಿಡುಗಡೆ

ಕರ್ನಾಟಕ ರಾಜ್ಯ ಮತ್ತು ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‍ನ ಸಹಯೋಗದಲ್ಲಿ ದಿವಂಗತ ಲೋಕನಾಥ್ ಬೋಳಾರ್ ಸ್ಮರಣಾರ್ಥ ಸೆಪ್ಟಂಬರ್ 27ರಿಂದ 30ರ ವರೆಗೆ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನಲ್ಲಿ ಜರಗಿತು.

ಮುಂಬೈಯ ಮೊಗವೀರ ವ್ಯವಸ್ಥಾಪಕ ಮಂಡಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಶಾಖೆ, ಮಂಗಳೂರು ಬಂದರ್ ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೇತೃತ್ವದಲ್ಲಿ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾ ಕೂಟ ನಡೆಯಲಿದೆ. ಮತ್ಸೋದ್ಯಮಿ ಆನಂದ ಪಿ ಸುವರ್ಣ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಮಂಗಳೂರು ಬಂದರ್‍ನ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕನಾಥ್ ಬೋಳಾರ್ ಮೀನುಗಾರರಿಗೆ ಒಂದು ಶಕ್ತಿಯಾಗಿದ್ದರು, ಅವರು ಮೀನುಗಾರಿಕೆ ಪ್ರವೇಶ ಮಾಡಿದ ಮೇಲೆ ಮೀನುಗಾರರ ಬದುಕು ಹಸನಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದ ಬೋಳಾರ್ ರವರ ಸ್ಮರಣಾರ್ಥ ಕ್ರೀಡಾಕೂಟವನ್ನು ಆಯೋಜಿಸಿ ಅವರಿಗೆ ಗೌರವ ಸಲ್ಲಿಸೋಣ ಎಂದರು.

ಮೂಡಾದ ಮಾಜಿ ಅಧ್ಯಕ್ಷ ತೇಜೋಮಯರು ಮಾತನಾಡಿ, ಲೋಕನಾಥ್ ಬೋಳಾರ್ ರವರು ರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದ ದಕ್ಷಿಣ ಭಾರತೀಯರಲ್ಲಿ ಅಗ್ರಗಣ್ಯರು. ಅವರು ಕ್ರೀಡಾಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘವಾದುದು. ಅವರು ಮೀನುಗಾರ ಸಮೂದಾಯಕ್ಕೆ ಮಾಡಿದ ಸೇವೆಗೆ ಮಂಗಳೂರು ಮೀನುಗಾರಿಕಾ ಬಂದರ್‍ಗೆ ಅವರ ಹೆಸರನ್ನು ಇಟ್ಟು ಗೌರವ ಸಲ್ಲಿಸುವ ಬಗ್ಗೆ ಸರಕಾರಕ್ಕೆ ಬೇಡಿಕೆ ಇಡೋಣವೆಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ರವರು ಕ್ರೀಡೋತ್ಸವದ ಮಾಹಿತಿ ನೀಡಿ, ಆಕರ್ಷಕ ಮೆರವಣಿಗೆಯನ್ನು ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಮಂಗಳಾ ಕ್ರೀಡಾಂಗಣವರೆಗೆ ನಡೆಸಲಾಗುವುದು ಎಂದರು.

ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷಣ್ ಕೋಡಿಕಲ್, ಮಂಗಳೂರು ಟ್ರಾಲ್ ಬೋಟು ಸೊಸೈಟಿ ಅಧ್ಯಕ್ಷ ನಿತಿನ್ ಕುಮಾರ್, ಬೆಂಗಳೂರು ಮೊಗವೀರ ಸಂಘದ ಮಾಜಿ ಅಧ್ಯಕ್ಷ ಮೋನಪ್ಪ ಸುವರ್ಣ, ದ.ಕ ಅತ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ತಾರನಾಥ ಶೆಟ್ಟಿ, ಮುಂತಾದವರು ಶುಭಹಾರೈಸಿದರು. ಸದಾಶಿವ ಕೋಟ್ಯಾನ್, ಭರತ್ ಕುಮಾರ್ ಎರ್ಮಾಳ್, ಮೋಹನ್ ಕೋಡಿಕಲ್, ವಿಜಯ ಸುವರ್ಣ, ಆಶಾ ಸುವರ್ಣ, ಬಾಲಕೃಷ್ಣ ಸುವರ್ಣ, ಯತೀಶ್ ಬೈಕಂಪಾಡಿ, ಶೋಭೇಂದ್ರ ಸಸಿಹಿತ್ಲು, ಸಂದೀಪ್ ಪುತ್ರನ್ ಅರವಿಂದ ಸಸಿಹಿತ್ಲು, ಕವಿತಾ, ವೆಂಕಟೇಶ್, ಶಿವಾನಂದ ಬೋಳಾರ, ವರದರಾಜ್ ಬಂಗೇರ, ಶಾಮ್ ಲಾಲ್ ಬೋಳೂರು, ಬಾಬು ಸಾಲ್ಯಾನ್ ದೇವಾನಂದ ಬೋಳೂರು, ಅಶೋಕ್ ಸುವರ್ಣ, ಕೆ ಎಲ್ ಬಂಗೇರ, ಜಿ. ಕೆ ರಮೇಶ್, ಕೃಷ್ಣ ಶೆಣೈ, ಮೋಹನ್ ಬೆಂಗ್ರೆ, ಸುಧೀರ ವಿ ಅಮೀನ್, ಶ್ರೀಮತಿ ಪವನ್, ಸುಭಾಶ್ಚಂದ್ರ ಬೋಳಾರ್, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.