ಮಂಗಳೂರಿನಲ್ಲಿ ಕೇದಗೆ ಬದಲಿಗೆ ಮುಂಡೇವು ಮಾರಿದರು…!

ನಾಗನಿಗೆ ಪ್ರಿಯವಾದ ಕೇದಗೆಗೆ ನಾಗರ ಪಂಚಮಿಯಂದು ಭಾರೀ ಬೇಡಿಕೆಯಿದ್ದು ಇದೀಗ ಮಂಗಳೂರಿನ ಕಾರ್‍ಸ್ಟ್ರೀಟ್‍ನಲ್ಲಿ ಕೇದಗೆಯ ಬದಲಿಗೆ ಮುಂಡೇವು ಎಲೆಯನ್ನು ಭಕ್ತರಿಗೆ ಮಾರಾಟ ಮಾಡಿ ಯಾಮಾರಿಸಿದ ಕುರಿತ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗರಪಂಚಮಿ ದಿನದಂದು ನಾಗಾರಾಧನೆಗೆ ಕೇದಗೆ ಎಂದು ಖರೀದಿಸಿ ತಂದ ಬಳಿಕ ಭಕ್ತರೊಬ್ಬರು ಇದನ್ನು ಮುಂಡೇವು ಎಲೆಯೆಂದು ಖಚಿತಪಡಿಸಿದ್ದು ಗ್ರಾಹಕರು ಜಾಗೃತರಾಗಿರುವಂತೆ ವಿನಂತಿಸಿಕೊಂಡಿದ್ದಾರೆ. ಮುಂಡೇವು ಎಲೆಗಳನ್ನು ಕಟ್ಟವನ್ನಾಗಿಸಿ ಮಂಗಳೂರಿನ ಕಾರ್‍ಸ್ಟ್ರೀಸ್‍ನಲ್ಲಿ ಕಟ್ಟಕ್ಕೆ 300 ರೂಪಾಯಿಯಂತೆ ಪಡೆದುಕೊಂಡಿದ್ದಾರೆ. ನಮ್ಮವರೇ ನಮಗೆ ಮೋಸ ಮಾಡುತ್ತಿದ್ದಾರೆ ಎಂದು ಭಕ್ತರು ಅಳಲನ್ನು ತೋಡಿಕೊಂಡಿದ್ದಾರೆ.
