ಕಾಪುವಿನಲ್ಲಿ ಜೀವಂತ ನಾಗಗಳ ಆರಾಧನೆ..!
ಕಾಪು ತಾಲೂಕಿನ ಮಜೂರು-ಮಲ್ಲಾರು ಗೋವರ್ಧನ ಭಟ್ ಅವರ ಮನೆಯಲ್ಲಿ ಮನೆಯವರೆಲ್ಲರೂ ಜತೆ ಸೇರಿ ಜೀವಂತ ನಾಗರ ಹಾವಿಗೆ ಆರತಿ ಬೆಳಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಗಾಯಗೊಂಡ ನಾಗರ ಹಾವುಗಳನ್ನು ಮನೆಗೆ ತಂದು ಶುಶ್ರೂಷೆ ನೀಡಿ, ಆರೈಕೆ ಮಾಡುವ ಉರಗ ಪ್ರೇಮಿ ಮಜೂರು ಗೋವರ್ಧನ ಭಟ್ ಅವರು ಪ್ರತೀ ವರ್ಷ ತಮ್ಮ ಮನೆಯಲ್ಲಿ ಶುಶ್ರೂಷೆಯಲ್ಲಿರುವ ನಾಗರ ಹಾವಿಗೆ ತನು ಎರೆದು, ಆರತಿ ಬೆಳಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಮನೆಯಲ್ಲಿ ಎರಡು ನಾಗರ ಹಾವುಗಳಿಗೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಗೈದರು.