ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರಿಡುವ ಬಗ್ಗೆ ಪ್ರಸ್ತಾಪ :ಗದ್ದಲದ ಗೂಡಾದ ಪಾಲಿಕೆ ಸಭೆ

ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡುವ ಬಗ್ಗೆ ಬಿಜೆಪಿ ಸದಸ್ಯರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಇದರಿಂದಾಗಿ ಸಭೆಯಲ್ಲಿ ಗದ್ದಲ ಉಂಟಾಗಿ ಕೆಲ ಕಾಲ ಸಭೆ ಮುಂದೂಡಿಕೆಯಾದ ಘಟನೆ ನಡೆಯಿತು.

ಪಾಲಿಕೆಯ ಸಭೆ ಸಾಮಾನ್ಯ ಸಭೆಯಲ್ಲಿ ಸುರತ್ಕಲ್ ಜಂಕ್ಷನ್‍ಗೆ ವೀರ ಸಾವರ್ಕರ್ ಹೆಸರು ಇಡಬೇಕೆಂದು ಪ್ರಸ್ತಾಪ ಮಾಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೆ ಇಳಿದಾಗ, ಬಿಜೆಪಿ ಸದಸ್ಯರು ವೀರ ಸಾವರ್ಕರ್ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.
ಕಳೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಅಜೆಂಡದಲ್ಲಿ ಬಿಜೆಪಿ ಚರ್ಚೆಗೆ ಅವಕಾಶ ನೀಡಲಿಲ್ಲ. ಅದನ್ನು ಸ್ಥಿರೀಕರಣಗೊಳಿಸದೆ ನಮ್ಮ ಆಕ್ಷೇಪಣೆ ದಾಖಲು ಮಾಡಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯ ಮಾಡಿದರು.

Related Posts

Leave a Reply

Your email address will not be published.