ಏಲಿಯನ್ ರೂಪದಲ್ಲಿ ಬಡವರ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುವ ಮಣಿ ಸಂತು

ಎಲ್ಲಾ ಹುಡುಗರು ಹಬ್ಬದ ಸಡಗರದಲ್ಲಿ ಸಂಭ್ರಮಿಸುತ್ತಿರುವಾಗ ಇಲ್ಲೊಬ್ಬರು ಒಬ್ಬರ ಜೀವ ಉಳಿಸಲೆಂದು ವೇಷ ಹಾಕಿ ಜನಮನಸೆಳೆಯುತ್ತಿದ್ದಾರೆ. ಇವರ ಹೆಸರು ಬೆಂಕಿ ಮಣಿ ಸಂತು ಈ ಹಿಂದೆ ಅದೆಷ್ಟೋ ಬಡವರ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ ಕೀರ್ತಿ ಇವರದ್ದು ಶ್ರೀ ಮಹಾರಾಜ ವರಹ ಸ್ವಾಮಿ ದೇವಸ್ಥಾನದಲ್ಲಿ ಕರ್ಕಾಟಕ ಅಮಾಸ್ಯೆ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಬಡ ರೋಗಿಯೊಬ್ಬ ಸಹಾಯಾರ್ಥವಾಗಿ ಬೆಳ್ಳಿಗೆ 3ಗಂಟೆ ಜಾವದಲ್ಲಿ ಉಡುಪಿಯ ಕಟಪಾಡಿ ಹೋಗಿ ತನ್ನ ಇಡೀ ದೇಹದ ಮೇಲೆ ಏಲಿಯನ್ ರೂಪವನ್ನು ಹೋಲುವ ಚಿತ್ರವನ್ನು ಪೇಟಿಂಗ್ ಮೂಲಕ ಬಿಡಿಸಿಕೊಂಡು ತನ್ನ ವೇಷದ ಮೂಲಕ ಮಳೆ ಬಿಸಿಲು ಎನ್ನುದನ್ನೇ ಲೆಕ್ಕಿಸದೆ ದಾನಿಗಳ ಮುಂದೆ ಕೈ ಚಾಚಿ ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 9 ರವರೆಗೆ ಊಟ ತಿಂಡಿಯನ್ನು ಮಾಡದೆ ಬರೀ ನೀರು ಸೇವನೆ ಮಾಡಿಕೊಂಡು ಹಣವನ್ನು ಸಂಗ್ರಹ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

Related Posts

Leave a Reply

Your email address will not be published.