ಮಂಜೇಶ್ವರ : ರಾಗಂ ಜಂಕ್ಷನ್ ಮಧ್ಯ ಅಂಡರ್ ಪಾಸ್ ನಿರ್ಮಿಸಬೇಕೆಂಬ ಆಗ್ರಹ

ಮಂಜೇಶ್ವರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿರುವ ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ರಾಗಂ ಜಂಕ್ಷನ್ ಮಧ್ಯ ಅಂಡರ್ ಪಾಸ್ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ಊರ ನಾಗರೀಕರು ಸಮಿತಿ ರಚಿಸಿ ಸಂಬಂಧಪಟ್ಟವರಿಗೆ ಮನವಿ ನೀಡಲು ತೀರ್ಮಾನಿಸಿದ್ದಾರೆ
ದಿನನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಿರುವ ಹಾಗೂ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಸೇರಿದಂತೆ ಇತರ ಹಲವು ಶಾಲೆಗಳನ್ನು ಕೂಡಾ ಸಂಪರ್ಕದ ರಸ್ತೆ ಇರುವ ಗೋವಿಂದ ಪೈ ಕಾಲೇಜು, ಮತ್ತೊಂದು ಭಾಗದಲ್ಲಿ ಸರಕಾರಿ ಆಸ್ಪತ್ರೆ, ರೈಲ್ವೇ ನಿಲ್ದಾಣ, ಸ್ಥಳೀಯಾಡಳಿತ ಸಂಸ್ಥೆ, ರೇಶನ್ ಅಂಗಡಿಗಳು ಸೇರಿದಂತೆ ಅತ್ಯವಶ್ಯಕ ಸ್ಥಾಪಣೆಗಳು ಇರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತಡೆಗೋಡೆಗಳು ಬಂದರೆ ಜನರಿಗೆ ಆಚೀಚೆ ದಾಟಲು ಪರದಾಡಬೇಕಾದ ಪರಿಸ್ಥಿತಿ ಎದುರಾಗುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಶಾಸಕ, ಸಂಸದ, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಪ್ರಾಧಿಕಾರದ ರೀಜಿನಲ್ ಕಚೇರಿಗೆ ಮನವಿ ಪತ್ರವನ್ನು ನೀಡಲು ತೀರ್ಮಾನಿಸಲಾಯಿತು.
ಯಕರಿಯ್ಯ ರವರ ಅಧ್ಯಕ್ಷತೆಯಲ್ಲಿ ಸೇರಿದ ಹೋರಾಟ ಸಮಿತಿ ರೂಪೀಕರಣ ಸಭೆಯಲ್ಲಿ ಅಶ್ರಫ್ ಬಡಾಜೆಯವರನ್ನು ಜನರಲ್ ಕನ್ವೀರರಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜನಪ್ರತಿನಿಧಿಗಳಾದ ಯಾದವ ಬಡಾಜೆ, ಅಬೂಬಕ್ಕರ್ ಸಿದ್ದೀಖ್, ಕುಲ್ಸುಮ್ಮ, ರುಬೀನಾ , ನೇತಾರರಾದ ರಮೇಶ್, ಪಿ ಎಚ್ ಅಬ್ದುಲ್ ಹಮೀದ್, ಮೂಸ ಗೇರುಕಟ್ಟೆ, ಇಬ್ರಾಹಿಂ ಕುಂತೂರು, ಫಾರೂಕ್ ಉಸ್ಮಾನ್, ನಯನಾರ್ , ಫಾದರ್ ಮೈಕಲ್ ಸೇರಿದಂತೆ ಹಲವರು