ಗೃಹಲಕ್ಷ್ಮಿ ಯೋಜನೆಗೆ ಕಾರ್ಕಳದಲ್ಲಿ ಚಾಲನೆ

ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಕಾರ್ಕಳದ ಪುರಸಭೆಯ ಮುಖ್ಯ ಅಧಿಕಾರಿಯಾದ ರೂಪಶೆಟ್ಟಿಯವರು ಕಾರ್ಕಳದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರೂ ಕಡೆ ಅರ್ಜಿಯ ನೊಂದಣಿ ಮಾಡಲು ಅವಕಾಶ ಇದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.

ನಂತರ ಮಾತನಾಡಿದ ಪುರಸಭೆ ಸದಸ್ಯರಾದ ಶುಭದ ರಾವ್ ಅವರು ನಾವು ಯೋಜನೆಯ ಪ್ರಯೋಜನ ಪಡೆಯಲು ಬರುವವರಿಗೆ ಸ್ವಾಗತ ಕೋರಲು ಬಂದಿರುತ್ತೇವೆ. ಬಿಜೆಪಿಯವರು ಈ ಯೋಜನೆಗೆ ಬಿಟ್ಟಿ ಭಾಗ್ಯ ಎಂದು ಟೀಕಿಸಿದ್ದಾರೆ ಇದು ಬಿಟ್ಟಿ ಭಾಗ್ಯವಲ್ಲ ಮನೆಯಲ್ಲಿರುವ ಗ್ರಹಿಣಿಗೆ ಆರ್ಥಿಕವಾಗಿ ಸಹಾಯವಾಗುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇಂತಹ ಯೋಜನೆ ಜಾರಿಗೆ ತಂದಿರುತ್ತದೆ ಎಂದು ಹೇಳಿದರು.

Related Posts

Leave a Reply

Your email address will not be published.