ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ಮಂಗಳೂರಿನ ಪಂಪ್‍ವೆಲ್ ಬಳಿ ಹೊಟೇಲ್ ಶುಭಾರಂಭ

ಮಂಜೇಶ್ವರ: ದೇಶಿ, ವಿದೇಶಿ ಗ್ರಾಹಕರ ಅಪೇಕ್ಷೆಯನ್ನು ಪೂರೈಸುವ ವಿಭಿನ್ನತೆಯೊಂದಿಗೆ, ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಹಿರಾ ಇಂಟರ್ ನ್ಯಾಷನಲ್, ಇದೀಗ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ. ಮಂಗಳೂರಿನ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತಲೆ ಎತ್ತಿ ನಿಂತಿರುವ ಮಂಜೇಶ್ವರ ಉದ್ಯಾವರ ನಿವಾಸಿ ಆಲಿ ಕುಟ್ಟಿ ಹಾಜಿಯವರ ಮಾಲಕತ್ವದಲ್ಲಿರುವ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಅಂತರಾಷ್ಟ್ರೀಯ ಗುಣಮಟ್ಟದ, ಕೇವಲ ಫೈವ್ ಸ್ಟಾರ್ ಹೊಟೇಲ್‍ಗಳಲ್ಲಿ ಮಾತ್ರ ಇರುತ್ತಿದ್ದ ವಸತಿಗೃಹ ಮತ್ತು ಹೊಟೇಲ್ ಸೌಲಭ್ಯವನ್ನು ಎಲ್ಲಾ ವರ್ಗದ ಜನರಿಗೂ ತಲುಪಿಸುವ ಉದ್ದೇಶದೊಂದಿಗೆ ಆರಂಭಗೊಂಡಿದೆ ಹೊಟೇಲ್ ಹಿರಾ ಇಂಟರ್ ನ್ಯಾಷನಲ್. ಶುದ್ಧ ಶಾಖಾಹಾರಿ ಊಟಕ್ಕಾಗಿ ಉತ್ಸವ ವೆಜ್ ರೆಸ್ಟೋರೆಂಟ್ ಮತ್ತು ನಾನ್ ವೆಜ್ ಊಟಕ್ಕಾಗಿ ಸೀಪರ್ಲ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ಹೊಂದಿದೆ. ಬ್ಯಾಂಕ್ವೆಟ್ ಹಾಲ್, ಮೀಟಿಂಗ್ ಹಾಲ್‍ಗಳು ಕೂಡಾ ಇವೆ. ನೂತನವಾಗಿ ನಿರ್ಮಾಣಗೊಂಡ ಒಂಭತ್ತು ಅಂತಸ್ಥಿನ ಕಟ್ಟಡದಲ್ಲಿ 42 ರೂಮ್ ಗಳಿದ್ದು, ಎಸಿ ಡಬಲ್ ಬೆಡ್‍ಗಳು, ಎಸಿ, ಸಿಂಗಲ್ ಬೆಡ್ ಸೇರಿದಂತೆ ಎಲ್ಲಾ ರೀತಿಯ ವಸತಿ ಸೌಲಭ್ಯವಿದೆ.

ವಿಶೇಷವಾಗಿ ನಾಲ್ಕುಜನ ಉಳಿಯುವಂಥ ಫ್ಯಾಮಿಲಿ ಬೆಡ್, ಸೌಲಭ್ಯ ಕೂಡಾ ಇದೆ. ಈಜುಕೊಳದ ಸೌಕರ್ಯವನ್ನು ಕೂಡಾ ಹೊಂದಿರುವ ಇದರಲ್ಲಿ 2 ಲಿಪ್ಟ್ ಮತ್ತು ನೂರಕ್ಕೂ ಮಿಕ್ಕ ವಾಹನಗಳ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇದೆ. ಇಲ್ಲಿಯ ಮತ್ತೊಂದು ವಿಶೇಷತೆಯಂದ್ರೆ ಈ ಕಟ್ಟಡದ ಪರಿಸರ ರಮಣೀಯವಾದ ಹಸಿರು ಹಸಿರಾಗಿರುವ ದೃಶ್ಯಗಳನ್ನೊಳಗೊಂಡಿದೆ. ಜೊತೆಯಾಗಿ ಸಮೀಪದಲ್ಲೇ ಮಸೀದಿ, ಆಸ್ಪತ್ರೆಗಳು ಹಾಗೂ ಹಲವು ರೀತಿಯ ವ್ಯಾಪಾರ ಮಳಿಗೆಗಳು ಇವೆ.

ಕೇರಳ ಭಾಗದಿಂದ ಆಗಮಿಸುವವರಿಗೂ, ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಎಲ್ಲಾ ಭಾಗಗಳಿಂದಲೂ ಆಗಮಿಸುವ ಯಾತ್ರಿಕರಿಗೆ ಸೌಕರ್ಯವಾಗುವ ರೀತಿಯಲ್ಲಿ ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ತಲೆ ಎತ್ತಿದೆ.

ಶುಕ್ರವಾರದಂದು ಕಟ್ಟಡ ಮಾಲಕ ಆಲಿ ಕುಟ್ಟಿ ಹಾಜಿಯವರು ರಿಬ್ಬನ್ ಕತ್ತರಿಸುವ ಮೂಲಕ ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ನ್ನು ಲೋಕಾರ್ಪಣೆಗೈದರು.

ಬಳಿಕ ವಸತಿ ಗೃಹದ ಕೊಠಡಿಯನ್ನು ಹಿರಿಯ ವಿದ್ವಾಂಸ ಕೆ ಎಸ್ ಇಬ್ರಾಹಿಂ ಧಾರಿಮಿ ಉದ್ಘಾಟಿಸಿ ಪ್ರಾರ್ಥನೆಗೈದರು ಬಳಿಕ v4 ನ್ಯೂಸಿನೊಂದಿಗೆ ಮಾತಾಡಿದ ಅವರು ಮಂಗಳೂರಿನ ಹೃದಯ ಭಾಗದಲ್ಲಿ ತಲೆ ಎತ್ತಿರುವ ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ಎಲ್ಲಾ ಸೌಕರ್ಯಗಳಿಂದ ಸುಸಜ್ಜಿತವಾದ ರೀತಿಯಲ್ಲಿ ಗ್ರಾಹಕರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಹೊಂದಿ ಕೊಂಡಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡಕೊಳ್ಳಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಶಬೀರ್ ಅಹ್ಮದ್ ರವರು ಗಿ4 ನ್ಯೂಸಿನೊಂದಿಗೆ ಮಾತನಾಡಿ ಕೇವಲ ಲಾಭದ ಉದ್ದೇಶದಿಂದ ಹಿರಾ ಇಂಟರ್ ನ್ಯಾಷನಲ್ ತಲೆ ಎತ್ತಿಕೊಂಡಿಲ್ಲ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸೇವೆಗಳನ್ನು ನೀಡುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿಕೊಂಡು ಸಜ್ಜೀಕರಿಸಲಾಗಿದೆ. ಒಮ್ಮೆ ಇಲ್ಲಿಗೆ ಬೇಟಿ ನೀಡಿದರೆ ಇಲ್ಲಿಯ ವಿಶೇಷತೆಗಳನ್ನು ಕಾಣಬಹುದಾಗಿದೆ. ಅಂತರಾಷ್ಟ್ರ ಗುಣಮಟ್ಟವನ್ನು ಹೊಂದಿಕೊಂಡು ಸಾಮಾನ್ಯ ಜನತೆ ಅನುಭವಿಸುವ ರೀತಿಯಲ್ಲಿ ದರವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿ ಶುಭವನ್ನು ಹಾಕ್ರಿಸಿದರು.

ಬಳಿಕ ಹಿರಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ಹಸನ್ ಅಲಿ ಮೊಹಮ್ಮದ್ ಅಶ್ರಫ್ ರವರು ಗಿ4 ನ್ಯೂಸಿನೊಂದಿಗೆ ಮಾತನಾಡಿ (3) ಗ್ರಾಹಕರ ಸೌಕರ್ಯಕ್ಕನುಸಾರವಾಗಿ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಪ್ರತಿಯೊಂದು ಸೌಲಭ್ಯವನ್ನು ನೀಡಿ ಸೇವೆಯನ್ನು ಒದಗಿಸುವ ಯೋಜನೆಯನ್ನು ಇಟ್ಟುಕೊಂಡಿದ್ದೇವೆ. ಜೊತೆಯಾಗಿ ಡ್ರಾಪ್ ಆಂಡ್ ಪಿಕ್ ಅಪ್ ಸೌಕರ್ಯ ಕೂಡಾ ಇದೆ. ಜಿಮ್ ಸೌಕರ್ಯ ಕೂಡಾ ಇದೆ. ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ ಈ ಯೋಜನೆಯನ್ನು ಮಂಗಳೂರಿನ ಹೃದಯ ಭಾಗದಲ್ಲಿ ಜನರಿಗಾಗಿ ತೆರೆದಿಟ್ಟಿದ್ದೇವೆ ನಮ್ಮನ್ನು ಎಲ್ಲರೂ ಆಶೀರ್ವಾದಿಸಬೇಕಾಗಿದೆ ಎಂದು ಹೇಳಿ ಶುಭಾರಂಭಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭ ಆಲಿ ಕುಟ್ಟಿ ಹಾಜಿಯವರ ಧರ್ಮಪತ್ನಿ ಆಸ್ಯಮ್ಮ, ಉದ್ಯಮಿ ಮೊಹಮ್ಮದ್ ಹಾಜಿ, ಉಮ್ಮರ್ ಬಶೀರ್, ಇಬ್ರಾಹಿಂ, ಇಸ್ಮಾಯಿಲ್ ಅಲಿ ಇಮ್ರಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.