ಬಿ.ಸಿ.ರೋಡಿನಲ್ಲಿ ಹಿರಿಯ ರಂಗಕರ್ಮಿ ಮಂಜು ವಿಟ್ಲ ಸಂತಾಪ ಸೂಚಕ ಸಭೆ
ಬಿ.ಸಿ.ರೋಡು: ಚಿಣ್ಣರಲೋಕ ಮೋಕೆದ ಕಲಾವಿದರು ಬಂಟ್ವಾಳ ಆಶ್ರಯದಲ್ಲಿ, ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ, ಚಿಣ್ಣರಲೋಕ ಸಂಸ್ಥೆಯ ಗೌರವ ಸಲಹೆಗಾರರಾದ ಮಂಜು ವಿಟ್ಲ ಅವರಿಗೆ ಸಂತಾಪ ಸೂಚಕ ಸಭೆಯು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.ಚಿಣ್ಣರ ಲೋಕ ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್, ಚಿಣ್ಣರ ಲೋಕ ಸೇವಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಲಾಜಿ ಬೈಲು ಚಂದ್ರಹಾಸ ರೈ, ಸಂಸ್ಥೆಯ ನಿರ್ದೇಶಕರಾದ ತಾರಾನಾಥ ಕೊಟ್ಟಾರಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಮೋಹನದಾಸ ಕೊಟ್ಟಾರಿ ಮುನ್ನೂರು ಮೊದಲಾದವರು ಮಾತನಾಡಿ ಸಂತಾಪ ಸೂಚಿಸಿದರು. ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.