ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಯಿಂದ 30-09-2023 ರಂದು ಮಾದಕ ದೃವ್ಯ ಜಾಗೃತಿ ಜಾಥಾ
ಮಂಗಳೂರು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಪದವಿ, ಪದವಿ ಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ವಿಭಾಗಗಳ ಜಂಟಿ ಆಶ್ರಯದಲ್ಲಿ “ಮಾದಕ
ದೃವ್ಯ ಜಾಗೃತಿ ಜಾಥಾ”ವನ್ನು ಶನಿವಾರ, ಸಪ್ಟೆಂಬರ್ 30, 2023 ರಂದು ಬೆಳಗ್ಗೆ 9.15 ಕ್ಕೆ ಆಯೋಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕೋರ್ಟ್ ವಾರ್ಡಿನ ಕಾರ್ಪೊರೇಟರ್ ಶ್ರೀ ಎ ಸಿ ವಿನಯರಾಜ್ ಇವರು ಜಾಥಾಕ್ಕೆ ಚಾಲನೆ ನೀಡಲಿರುವರು. ಮಂಗಳೂರಿನ ಸಹಾಯಕ ಪೆÇೀಲಿಸ್ ಆಯುಕ್ತರಾದ ಶ್ರೀ ಎಸ್. ಮಹೇಶ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾದಕ ದೃವ್ಯ ವ್ಯಸನದದ ಬಗ್ಗೆ ಮಾಹಿತಿ ನೀಡಲಿರುವರು. ಜಾಥಾವು ಕಾಲೇಜಿನಿಂದ ಹೊರಟು ಮದರ್ ತೆರೇಸಾ ಮಾರ್ಗವಾಗಿ ಅವೇರಿ ವೃತ್ತದಿಂದ ಡೊನ್‍ಬೊಸ್ಕೊ ಹಾಲ್ ರಸ್ತೆಯಲ್ಲಿ ಸಾಗಿ ಬಲ್ಮಠ ಮಾರ್ಗದ
ಮೂಲಕ ಹಾದು ಹಂಪನಕಟ್ಟೆ ವೃತ್ತದಿಂದ ಮಿಲಾಗ್ರಿಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸಂಪನ್ನಗೊಳ್ಳಲಿದೆ. ಈ ಜಾಥಾದಲ್ಲಿ ಸುಮಾರು 1500 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಳ್ಳಲ್ಲಿರುವರು.