ತಹಶೀಲ್ದಾರ್‌ಗೆ ಹಲ್ಲೆ ಮಾಡಿದ ಶಾಸಕ : ಶಾಸಕರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
![](https://v4news.com/wp-content/uploads/2023/11/images-13.jpeg)
: ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ (MLA AKM Ashraf) ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಂದು ವರ್ಷ ಸಜೆ ವಿಧಿಸಿದೆ.2015ರಲ್ಲಿ ನವೆಂಬರ್ 25 ರಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಾನ್ಪರೆನ್ಸ್ ಹಾಲ್‌ನಲ್ಲಿ ಚುನಾವಣೆ ಕುರಿತು ಹಿಯರಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಮತದಾರನೋರ್ವನ ಅರ್ಜಿಯಲ್ಲಿ ಲೋಪ ಇರುವ ಕಾರಣ ಬದಿಗಿರಿಸಿದ್ದರು. ಇದರಿಂದ ಕೋಪಗೊಂಡ ಕೆಎಂ ಅಶ್ರಫ್ ಮತ್ತಿತರರು ಅಂದಿನ ಡೆಪ್ಯುಟಿ ತಹಶೀಲ್ದಾರ್ ಆಗಿದ್ದ ದಾಮೋದರ ಸಹಿತ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು.ಡೆಪ್ಯೂಟಿ ತಹಶೀಲ್ದಾರ್ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಗಿ, ಆಸನಗಳನ್ನು ಎಳೆದು ಪೊಲೀಸರಿಗೆ ದೂರು ನೀಡಲಾಗಿತ್ತು.ಅಶ್ರಫ್ ಅವರಲ್ಲದೆ ಬಶೀರ್, ಅಬ್ದುಲ್ಲ, ಅಬ್ದುಲ್ಲ ಖಾದರ್ ಅವರಿಗೆ ವಿವಿಧ ಸೆಕ್ಷನ್‌ಗಳ ಪ್ರಕಾರ ಒಂದು ವರ್ಷ ಮೂರು ತಿಂಗಳು ಸಜೆ ಹಾಗೂ ಇಪ್ಪತ್ತು ಸಾವಿರ ರೂ. ದಂಡ ವಿಧಿಸಿದೆ.ಮಾಧ್ಯಮಗಳಿಗೆ ಅಶ್ರಫ್ ಅವರು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾಮೀನು ಪಡೆದಿರುವುದಾಗಿಯೂ, ತೀರ್ಪಿಣ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡುವುದಾಗಿ ಶಾಸಕ ಅಶ್ರಫ್ ಹೇಳಿದ್ದಾರೆ ಎಂದು ವರದಿಯಾಗಿದೆ.