ಬಂದ್ಯೋಡ್ : ವೀರನಗರ ಜನನಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿವಿಧ ಆಟೋಟ ಸ್ಪರ್ಧೆ

ಬಂದ್ಯೋಡ್ ನ ಅಡ್ಕ ವೀರನಗರ ಜನನಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಚತುರ್ಥಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆದವು.


ಹಗ್ಗ ಜಗ್ಗಾಟ ದಲ್ಲಿ ಶಿವ ಶಕ್ತಿ ಶಿರಿಯ ಈ ತಂಡಕ್ಕೆ ಪ್ರಥಮ ಬಹುಮಾನ ಹಾಗೂ ಪಿ ಎಫ್ ಸಿ ಪರಂಕಿಲ ತಂಡಕ್ಕೆ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ

ವೀರನಗರ ಅಡ್ಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿ ವೀರನಗರ ಅಡ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಬಜರಂಗದಳ ಸಂಚಾಲಕರಾದ ಸತ್ಯ ವೀರನಗರ ಮಂಗಲ್ಪಾಡಿ, ಭಾಸ್ಕರ ಬದಿಯಡ್ಕ, ಅಲಿ ವೀರನಗರ, ರಾಧಾಕೃಷ್ಣ ವೀರನಗರ , ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರವೀಣ್ ವೀರನಗರ ಸ್ವಾಗತಿಸಿದರು. ಬಾಲಕೃಷ್ಣ ವೀರನಗರ ನಿರೂಪಿಸಿದರು. ಹಾಗೂ ರಿತೇಶ್ ವೀರನಗರ ಧನ್ಯವಾದ ಸಮರ್ಪಿಸಿದರು

Related Posts

Leave a Reply

Your email address will not be published.