ವಿಕಲಚೇತನರಿಗೆ ಕೃತಕ ಕಾಲು-ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ

ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿಧಿಯಿಂದ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಕೃತಕ ಕಾಲನ್ನು ಇಂದು ದಿನಾಂಕ 14-10-2025 ರಂದು ಕಾಪು ಶಾಸಕ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು.
ಕುರ್ಕಾಲು ಗ್ರಾಮದ ಸದಾಶಿವ ಅಂಚನ್ ಹಾಗೂ ಪಡುಬೆಳ್ಳೆ ಗ್ರಾಮ ನಿವಾಸಿ ಗಿರಿಜಾ ಪೂಜಾರಿ ಸೇರಿದಂತೆ ಒಟ್ಟು 2 ಫಲಾನುಭವಿಗಳಿಗೆ ಕೃತಕ ಕಾಲನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯೋಗೀಶ್, ಕೋಟೆ ಶಕ್ತಿ ಕೇಂದ್ರದ ಹರ್ಷಿತ್, ಇಂದಿರಾ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.