ಕಡಂದಲೆಯಲ್ಲಿ ವಿದ್ಯುತ್ ಕೇಂದ್ರ ಸ್ಥಾಪನೆ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮೂಡುಬಿದಿರೆ : ಕಡಂದಲೆ ಗ್ರಾಮದ ಸರ್ವೆ ನಂಬ್ರ 308/ಪಿ1ರ 27 ಎಕ್ರೆ ಸರ್ಕಾರಿ ಭೂಮಿಯಲ್ಲಿ 400/220 ಕೆಪಿ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲುದ್ದೇಶಿಸಿದ್ದು ಈ ಸ್ಥಳದಲ್ಲಿರುವ 2229 ಮರಗಳನ್ನು ಕಡಿಯುವ ಹಿನ್ನಲೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯು ಮೂಡುಬಿದಿರೆ ಅರಣ್ಯ ಇಲಾಖೆಯ ಸಭಾಭವನದಲ್ಲಿ ಶನಿವಾರ ನಡೆಯಿತು..

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಉದ್ದೇಶಿತ ಯೋಜನೆಗಾಗಿ ಮರಗಳ ನ್ನು ತೆರವುಗೊಳಿಸಲಿದ್ದು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತವಾಗಿ ನೀಡುವಂತೆ ತಿಳಿಸಿದಾಗ ಕೆಲವರು ವಿರೋಧಿಸಿ ಮತ್ತೆ ಕೆಲವು ಗ್ರಾಮಸ್ಥರು ಮರ ಕಡಿಯಲು ಒಪ್ಪಿಗೆ ಸೂಚಿಸಿ ಲಿಖಿತರೂಪದಲ್ಲಿ ನೀಡಿದರು. ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಉಪ ಅರಣ್ಯಾಧಿಕಾರಿಗಳಾದ ಮಂಜುನಾಥ ಗಾಣಿಗ, ಅಶ್ವತ್ ಗಟ್ಟಿ, ಕೆಪಿಟಿಸಿಎಲ್‌ನ ಅಧಿಕಾರಿಗಳಾದ ಗಂಗಾಧರ, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು. ಕೆಎಂಎಫ್ ಅಧ್ಯಕ್ಷ ಕೆಪಿ ಸುಚರಿತ ಶೆಟ್ಟಿ, ಮಾಜಿ ಜಿ.ಪಂ. ಸದಸ್ಯೆ ಸುನಿತಾ ಸುಚರಿತ ಶೆಟ್ಟಿ, ಹೋರಾಟಗಾರ ಟಿ.ಎನ್ ಕೆಂಬಾರ ಮತ್ತಿತರರು ಉಪಸ್ಥಿತರಿದ್ದರು. ಒಟ್ಟು 25 ಪರ -ವಿರೋಧ ಅರ್ಜಿಗಳು ಸಲ್ಲಿಕೆಯಾದವು.

Related Posts

Leave a Reply

Your email address will not be published.