ಮೂಡುಬಿದರೆ :ಸ್ವಾಭಿಮಾನದ ಬದುಕಿಗಾಗಿ ಸರಕಾರ ಬದ್ಧ: ಶಾಸಕ ಕೋಟ್ಯಾನ್

ಮೂಡುಬಿದಿರೆ: ಅನ್ನ, ಬಟ್ಟೆ, ಉಳಿಯಲೊಂದು ಸೂರು ಇದು ಪ್ರತಿಯೊಬ್ಬರ ಅಪೇಕ್ಷೆ ಈ ಕನಿಷ್ಠ ವ್ಯವಸ್ಥೆ ಈಡೇರಿಸುವ ಬದ್ಧತೆಯಿಂದ ಇಂದು ರಾಜ್ಯ ಹಾಗೂ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.
ಅವರು ಮೂಡುಬಿದಿರೆ ಕನ್ನಡ ಭವನದಲ್ಲಿ ಸ್ವ ನಿಧಿ ಪರಿಚಯ ಬೋರ್ಡ್ ಹಾಗೂ ಪ್ರಧಾನ ಮಂತ್ರಿಯವರ ಶುಭಾಷಯ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಲಯ ಭಾರತ ಸರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ವಸತಿ ಯೋಜನೆ, ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಗಳನ್ನಯ ೫೮ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 459 ಬೀದಿ ಬದಿ ವ್ಯಾಪಾರಿಗಳಿಗೆ ಸ್ವ ನಿಧಿ ಪರಿಚಯ ಫಲಕಗಳನ್ನು ವಿತರಿಸಲಾಯಿತು.

umanath kotyan


ನಂತರ ಮಾತನಾಡಿದ ಕೋಟ್ಯಾನ್ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಬದುಕವಂತಾಗಲುಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಪ್ರಯೋಜನಗಳನ್ನುಪಡೆಯುವಂತೆ ಶಾಸಕರು ಮನವಿ ಮಾಡಿದರು. ಸರಕಾರದ ಯೋಜನೆಗಳು ದುರುಪಯೋಗವಾಗದೆ ಸದುಪಯೋಗವಾಗಬೇಕು ಎಂದ ಅವರು, ಅರ್ಹ ವ್ಯಕ್ತಿಗಳು ಸರಿಯಾದ ರೀತಿಯಲ್ಲಿ ಇದನ್ನು ಸದ್ಬಳಕೆ ಮಾಡುವಂತೆ ಕರೆ ನೀಡಿದರು.

imanath kotyan

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಪ್ರತಿಯೊಬ್ಬರೂ “ಸ್ವಾವಲಂಬಿ ಬದುಕು ಸಾಧಿಸುವಂತಾಗಬೇಕಾಗಿದೆ. ಸರಕಾರದ ವಿವಿಧ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆನೀಡಿದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಧಿಕಾರಿ ಇಂದು ಉಪಾಧ್ಯಕ್ಷೆ ಸುಜಾತಾ ಶಶಿಧರ್ ಸೇರಿದಂತೆ ಪುರಸಭಾ ಸದಸ್ಯರು. ಅಧಿಕಾರಿಗಳು ಹಾಜರಿದ್ದರು.


Related Posts

Leave a Reply

Your email address will not be published.