ಮೂಡುಬಿದಿರೆ: ಯೆನೆಪೋಯದಲ್ಲಿ ರೋಬಸ್ಟ್ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್

ಮೂಡುಬಿದಿರೆ: ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಷಿನ್ ಲರ್ನಿಂಗ್ ವಿಭಾಗದ ಸಹಯೋಗದೊಂದಿಗೆ ಯೆನಾರ್ಟಿಫಿಷಿಯಾ ವಿದ್ಯಾರ್ಥಿ ಸಂಘದ ವತಿಯಿಂದ ಅನ್‌ಸ್ಕ್ರ್ಯಾಂಬಲ್ 2.0 ರಾಷ್ಟ್ರೀಯ ಹ್ಯಾಕಥಾನ್ ಸ್ಪರ್ಧೆ ನಡೆಯಿತು.

ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಕ್ಯಾಂಪಸ್ ರಿಲೇಶನ್‌ಶಿಪ್ ಮ್ಯಾನೇಜರ್ ಲಕ್ಷ್ಮೀ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿಮ್ಮಲ್ಲಿ ನೀವು ನಂಬಿಕೆ ಇಟ್ಟರೆ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ. ಆದ್ದರಿಂದ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯದ ಕೊರತೆ ಇರುವುದರಿಂದ ಕಂಪನಿಗಳು ಉದ್ಯೋಗ ನೀಡಲು ಹೀದೇಟು ಹಾಕುತ್ತಿದೆ ಆದ್ದರಿಂದ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮಲ್ಲಿ ತೊಡಗಿಸಿಕೊಳ್ಳಿ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.

ವಿಭಾಗದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ,ಸಂಯೋಜಕಿ ಪ್ರೊ. ರಮ್ಯಾ ಎ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಮಹಮ್ಮದ್ ಸಿರಾಜ್ ಸ್ವಾಗತಿಸಿದರು. ಅಮೀಜಾ ಅತಿಥಿಯನ್ನು ಪರಿಚಯಿಸಿದರು. ಸಿಮ್ರಾಹ್, ಆಯೆಷಾ ಯೆನಾರ್ಟಿಫಿಷಿಯಾ ವಾರ್ಷಿಕ ವರದಿ ವಾಚಿಸಿದರು.
ಶಾದಿಲ್ ಇಬ್ರಾಹಿಂ ಅಹಮದ್ ಆಶಿಕ್ ಮತ್ತು ಶಾನವಾಜ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಅಫೀಫ್ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿ ಅಫೀಫ್ ವಂದಿಸಿದರು.
ಒಟ್ಟು ೮೫ ತಂಡಗಳ ಪೈಕಿ ಉತ್ತಮವಾದ ೨೦ ತಂಡಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.