ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ

ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಮೂಡಬಿದಿರೆಯ ಶ್ರೀ ಗೌರಿ ದೇವಸ್ಥಾನದಲ್ಲಿ ನಡೆಯಿತು.

ತಂಡದ ಹೊಸ ಲೋಗೋವನ್ನು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಇವರು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ ದೇವರ ಹಾಗೂ ಶ್ರೀ ಗೌರಿ ದೇವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಾಡಿರುವ ಸೇವೆಗಳ ಬಗ್ಗೆ, ಚಂದ್ರಶೇಖರ ದೇವರ ಪುಷ್ಕರಣಿಯು ನೂರಾರು ವರ್ಷಗಳಿಂದ ಪಾಳು ಬಿದ್ದ ಪರಿಸ್ಥಿತಿಯಲ್ಲಿತ್ತು. ಇದರ ಮರು ನಿರ್ಮಾಣದ ಕಾರ್ಯದಲ್ಲಿ ತಂಡದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯ ಸಂದರ್ಭದಲ್ಲಿ ಕಳೆದ 7 ವರ್ಷಗಳಿಂದ ತಮ್ಮ ತಂಡದ ವೈವಿಧ್ಯಮಯ ಕಲಾಕಾಣಿಕೆಯನ್ನು ಶಿಸ್ತುಭದ್ಧವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಗೌರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ರಾಜೇಶ್ ಭಟ್, ಬೆದ್ರ ಫ್ರೆಂಡ್ಸ್ ಹಾಗೂ ಮೂಡುಬಿದಿರೆ ಹೀಲಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಪ್ರಜ್ವಲ್ ಕುಲಾಲ್, ಸರ್ವೋದಯ ಫ್ರೆಂಡ್ಸ್ ವತಿಯಿಂದ ಪ್ರಕಾಶ್ ಕುಂದರ್, ಪವರ್ ಫ್ರೆಂಡ್ಸ್ ವತಿಯಿಂದ ಸುಧಾಕರ್ ಶೆಟ್ಟಿ ಹಾಗೂ ದೊಡ್ಮನೆ ಫ್ರೆಂಡ್ಸ್ ತಂಡದ ಹಿರಿಯರಾದ ಓಮಯ್ಯ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರಾಜೇಶ್ ಭಟ್ ನಿರೂಪಿಸಿದರು.

add - BDG

Related Posts

Leave a Reply

Your email address will not be published.