ಮೂಡುಬಿದಿರೆ :ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟ 2025

ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 42 ಪದಕ . ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದರಲ್ಲಿ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ.
14 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಪ್ರಣವ್ ಎಸ್ – ಟ್ರಯಥ್ಲಾನ್-ಎ (ಪ್ರಥಮ), ಸುಭಾಷ್ – ಟ್ರಯಥ್ಲಾನ್-ಸಿ (ದ್ವಿತೀಯ), ಆದರ್ಶ್ – ಟ್ರಯಥ್ಲಾನ್- (ಪ್ರಥಮ), ಮೇಘಾ – ಟ್ರಯಥ್ಲಾನ್- ಸಿ (ಪ್ರಥಮ), ಸುಜಾತ – ಟ್ರಯಥ್ಲಾನ್-ಸಿ (ದ್ವಿತೀಯ) 16 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕೃಷ್ಣ – ಜಾವೆಲಿನ್ ಎಸೆತ (ಪ್ರಥಮ), ಮೈಲಾರಿ – ಜಾವೆಲಿನ್ ಎಸೆತ (ದ್ವಿತೀಯ), ನವೀನ್ – ಉದ್ದ ಜಿಗಿತ (ಪ್ರಥಮ), ಲೋಹಿತ್ ಗೌಡ- ಉದ್ದ ಜಿಗಿತ (ದ್ವಿತೀಯ), ನ್ಯಾನ್‌ದೇವ್ – 80ಮೀ ಹರ್ಡಲ್ಸ್ (ಪ್ರಥಮ), ಪ್ರೇಕ್ಷಿತಾ – ಜಾವೆಲಿನ್ ಎಸೆತ (ಪ್ರಥಮ) 18 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕವೀಶ್ – ಜಾವೆಲಿನ್ ಎಸೆತ (ದ್ವಿತೀಯ), ಆಕಾಶ್ – 110ಮೀ ಹರ್ಡಲ್ಸ್ (ತೃತೀಯ), ಉಲ್ಲಾಸ್ – 5ಕಿಮೀ ನಡಿಗೆ (ತೃತೀಯ), ಗುರು – ಹೆಪ್ಟತ್ಲಾನ್ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಮನೀಶ್ – ಉದ್ದ ಜಿಗಿತ (ತೃತೀಯ), ಭಾಗೀರಥಿ – 3ಕಿಮೀ ನಡಿಗೆ (ತೃತೀಯ), ನಾಗಿಣಿ – 1000ಮೀ (ಪ್ರಥಮ), ಚರೀಷ್ಮಾ – 1000ಮೀ (ದ್ವಿತೀಯ), ವೈಷ್ಣವಿ – ಉದ್ದ ಜಿಗಿತ (ಪ್ರಥಮ), 20 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ದಯಾನಂದ – 400ಮೀ (ದ್ವಿತೀಯ), ನೊಯಲ್ – ಉದ್ದ ಜಿಗಿತ (ಪ್ರಥಮ), ತಬಶೀರ್ – ತ್ರಿವಿಧ ಜಿಗಿತ (ಪ್ರಥಮ), ಉದ್ದ ಜಿಗಿತ (ತೃತೀಯ), ದರ್ಶನ್ – 10ಕಿಮೀ ನಡಿಗೆ (ಪ್ರಥಮ), ಸರ್ವಜಿತ್ – 100ಮೀ (ತೃತೀಯ), ಅಬ್ದುಲ್ ರಜಕ್ – ಹ್ಯಾಮರ್ ತ್ರೋ (ದ್ವಿತೀಯ), ಯಶವಂತ 800ಮೀ(ದ್ವಿತೀಯ), ರಾಮು-400ಮೀ (ತೃತೀಯ), ನಂದ – ಜಾವೆಲಿನ್ ಎಸೆತ (ದ್ವಿತೀಯ), ಶಬರಿ – 100ಮೀ ಹರ್ಡಲ್ಸ್ (ತೃತೀಯ), ಗೀತಾ – 400ಮೀ (ದ್ವಿತೀಯ), ಐಶ್ವರ್ಯ – ಚಕ್ರ ಎಸೆತ (ದ್ವಿತೀಯ), ಗುಂಡು ಎಸೆತ (ದ್ವಿತೀಯ) 23 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಸನತ್- ಡೆಕತ್ಲಾನ್ (ಪ್ರಥಮ), ಗಣೇಶ್ – ಗುಂಡು ಎಸೆತ (ಪ್ರಥಮ), ನಾಗೇಂದ್ರ – ಚಕ್ರ ಎಸೆತ (ಪ್ರಥಮ), ರೇಖಾ – 800ಮೀ (ಪ್ರಥಮ), 400ಮೀ (ದ್ವಿತೀಯ), ಪ್ರಣಮ್ಯ – 10000ಮೀ (ಪ್ರಥಮ) 5000ಮೀ (ಪ್ರಥಮ) ಸ್ಥಾನ ಪಡೆದಿರುತ್ತಾರೆ.

ನೂತನ ಕೂಟ ದಾಖಲೆ : 18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ನಾಗಿಣಿ 1000 ಮೀ, ಹಾಗೂ 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನ್ಯಾನ್‌ದೇವ್ 80ಮೀ ಹರ್ಡಲ್ಸ್ ಹಾಗೂ 23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಚಕ್ರ ಎಸೆತದಲ್ಲಿ ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.ವೈಯಕ್ತಿಕ ಪ್ರಶಸ್ತಿ : 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆದರ್ಶ್ ಕ್ರೀಡಾಕೂಟದಲ್ಲಿ ಕೊಡ ಮಾಡುವ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾನೆ. ವಿಜೇತ ಕ್ರೀಡಾಪಟಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

add - Rai's spices

Related Posts

Leave a Reply

Your email address will not be published.