ಮುಲ್ಕಿ : ಪೇಜಾವರ ಸ್ವಾಮಿಗಳಿಗೆ ಪಿತೃ ವಿಯೋಗ
ಪೇಜಾವರ ಸ್ವಾಮೀಜಿಗಳ ಪೂರ್ವಶ್ರಮದ ತೀರ್ಥ ರೂಪರಾದ ಶತಾಯುಷಿ ಪಕ್ಷಿಕೆರೆ ಸಮೀಪದ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ತಡರಾತ್ರಿ ನಿಧನ ರಾದರು.ಅವರಿಗೆ 103 ವರ್ಷ ವಯಸ್ಸಾಗಿತ್ತು. ಕೃಷ್ಣ ಭಟ್ಟರು ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಸಹಿತ 5 ಪುತ್ರರು ಹಾಗೂ 6 ಪುತ್ರಿಯರನ್ನು ಅಗಲಿದ್ದಾರೆ.
ಪಕ್ಷಿಕೆರೆ ಸಮೀಪದ ಅಂಗಡಿಮಾರು ಬಳಿ ಹಿರಿಯ ಕೃಷಿಕರಾಗಿದ್ದ ಅವರು ಕಳೆದ ಹಲವಾರು ವರುಷಗಳಿಂದ ಪುರೋಹಿತ ವೃತ್ತಿ ಜತೆಗೆ ತುಳುನಾಡ ಪಂಚಾಗ ರಚಿಸಿದ್ದರು.ತಮ್ಮ ಮನೆಯಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುವುದರ ಜತೆಗೆ ಯುಗಪುರುಷ ಸಹಿತ ಮೂರು ದೇವಸ್ಧಾನಗಳಿಗೆ ರಥವನ್ನು ನೀಡಿ ಕೊಡುಗೈ ದಾನಿಯಾಗಿ ಜನಾನುರಾಗಿದ್ದರು.ಗುರುಗಳಾದ ಕೃಷ್ಣ ಭಟ್ಟರ ಅಂತ್ಯಕ್ರೀಯೆ 12 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.