ಕಾರ್ಕಳದಲ್ಲಿ ಪಕ್ಷ ಬಲಪಡಿಸುವ ಕಾರ್ಯ ಮುಂದುವರೆಯಲಿದೆ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಕಾರ್ಕಳ : ಕಾಂಗ್ರೇಸ್ ಪಕ್ಷ ಕಾರ್ಕಳ ಕ್ಷೇತ್ರದಲ್ಲಿ ಸೋತಿರಬಹುದು. ಮತ್ತೆ ಪಕ್ಷ ಬಲಪಡಿಸಿ ಕಾರ್ಯ ಮುಂದುವರೆಯಲಿದೆ. ಕಾರ್ಯಕರ್ತರ ದನಿಗೆ ಜೊತೆಯಾಗುವೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಕಾರ್ಕಳ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬಿಜೆಪಿ ಪಕ್ಷದ ಹಣಹಂಚಿ ವಾಮಮಾರ್ಗದ ಮೂಲಕ ಗೆದ್ದಿದೆ .ನಕಲಿ ಮತದಾನವನ್ನು ಮಾಡಿಸುವ ಮೂಲಕ ಜನರನ್ನು ಮೋಸಗೊಳಿಸಿದೆ ಎಂದರು, ಮತದಾನಕ್ಕಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.

ಶುಭದರಾವ್ ಮಾತನಾಡಿ ಶಾಸಕ 2018 ರಲ್ಲಿ ಬಿಜೆಪಿ 45000 ಅಂತರದಿಂದ ಗೆಲುವು ಸಾಧಿಸಿತ್ತು ಆದರೆ ಈ ಬಾರಿ ಕೇವಲ 4000 ಅಂತರದಿಂದ ಬಿಜೆಪಿ ಪಕ್ಷ ಗೆದ್ದಿದೆ. ಅದರೆ ಉದಯಣ್ಣ ಪ್ರಬಲ ಪೈಪೆÇೀಟಿ ನೀಡಿದ್ದಾರೆ. ಇದೊಂದು 71000 ಮತಗಳು ಗಳಿಸುವುದೆಂದರೆ ಹೆಮ್ಮೆಯ ವಿಷಯವಾಗಿದೆ,. ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ನೀಡುವ ಗ್ಯಾರಂಟಿ ಕಾರ್ಡ್ನ ಫಲಾನುಭವಿಗಳಾಗಲಿದ್ದಾರೆ, ಎಲ್ಲರನ್ನು ಟೀಕಿಸುವ ಮೊದಲು ತಮ್ಮನ್ನು ತಾವು ಅತ್ಮವಿವರ್ಷೆ ಮಾಡಿಕೊಳ್ಳಲಿ ಎಂದು ಸುನೀಲ್ ಕುಮಾರ್ ಅವರಿಗೆ ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಶ್ಪಕ್ ಅಹಮದ್ ,ಸುಭಿತ್ ಎನ್ ಅರ್, ಸದಾಶಿವ ದೇವಾಡಿಗ, ಗಿರೀಶ್ ಶೆಟ್ಟಿ ಕುಡುಪುಲಾಜೆ, ಉಷಾ, ಕಾಂತಿಶೆಟ್ಟಿ ,ಪ್ರಕಾಶ್ ಶೆಟ್ಟಿ , ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.