ನಂದಿತಾ ಎಸ್. ಭಟ್ ಐಸಿಎಐ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ಉತ್ತೀರ್ಣ

ಕಡಬ: ಪೆರ್ಲದಕೆರೆ ಕಡಬದ ಶ್ರೀ ಎಸ್. ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಭಟ್ ಇವರ ಪುತ್ರಿ ನಂದಿತಾ ಎಸ್. ಭಟ್ ಇವರು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ (ICAI) ನಡೆಸಿದ ಲೆಕ್ಕಪರಿಶೋಧಕರ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈoಟ್ ಆನ್ಸ್ ಶಾಲೆ, ಕಡಬದಲ್ಲಿ, ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪಿ.ಯು. ಕಾಲೇಜು, ರಾಮಕುಂಜದಲ್ಲಿ, ಹಾಗೂ ಪದವಿ ಶಿಕ್ಷಣವನ್ನು ಮಂಗಳೂರು ಟ್ರಿಶಾ ಕಾಲೇಜಿನಲ್ಲಿ ಪೂರೈಸಿದ್ದಾರೆ.

ನಂದಿತಾ ಅವರು ಮಂಗಳೂರು ನಗರದಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ನರೇಂದ್ರ ಪೈ ಅವರ ಕಚೇರಿಯಲ್ಲಿ Articleship ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

Related Posts

Leave a Reply

Your email address will not be published.