ಪ್ರಧಾನಿ ಮೋದಿ ತಾಯಿ ಹೀರಾ ಬೆನ್ ಆರೋಗ್ಯದಲ್ಲಿ ಏರುಪೇರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಆರೋಗ್ಯದಲ್ಲಿ ಏರುಪೇರಾಗಿದೆ. ಗುಜರಾತ್‌ನ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಆರೋಗ್ಯ ವಿಚಾರಿಸಲು ಸಂಜೆ ತೆರಳಲಿದ್ದಾರೆ. ಈ ವರ್ಷದ ಜೂನ್‌ನಲ್ಲಿ 99 ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ ಅವರ ಆರೋಗ್ಯ ಕಳೆದ ರಾತ್ರಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ತಾಯಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಹಾಗೂ ರಿಸರ್ಚ್ ಸೆಂಟರ್‌ನ ಹೇಳಿಕೆ ತಿಳಿಸಿದೆ. ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
